ಟಿ20 ವಿಶ್ವಕಪ್‌  ಸೂಪರ್‌ ಸಂಡೆ ಕದನ: ಟಾಸ್‌ ಗೆದ್ದ ರೋಹಿತ್‌ ಶರ್ಮಾ

Prasthutha|

ಟಿ20 ವಿಶ್ವಕಪ್‌ನ ಸೂಪರ್‌ ಸಂಡೆ ಕದನದಲ್ಲಿ ಟಾಸ್‌ ಗೆದ್ದ ರೋಹಿತ್‌ ಶರ್ಮಾ,  ಫೀಲ್ಡಿಂಗ್‌ ಆಯ್ದುಕೊಂಡಿದ್ದಾರೆ. ರೋಹಿತ್‌ ಶರ್ಮಾ,  ದಾಖಲೆಯ 8ನೇ ಟಿ20 ವಿಶ್ವಕಪ್‌ ಆಡುತ್ತಿದ್ದಾರೆ.

- Advertisement -

ಮೆಲ್ಬೋರ್ನ್‌ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಬೌಲರ್‌ಗಳಿಗೆ ನೆರವು ನೀಡುವ ಪಿಚ್‌ ಇದಾಗಿದೆ. ಆದರೂ ಸಾಮಾನ್ಯವಾಗಿ ಟಿ20 ಕ್ರಿಕೆಟ್‌ನಲ್ಲಿ 160-170 ಮೊತ್ತ ದಾಖಲಾಗುತ್ತದೆ.

2016ರಲ್ಲಿ ಆಸ್ಟ್ರೇಲಿಯಾ  ತಂಡದ ವಿರುದ್ಧ 184 ರನ್ ಗಳಿಸಿರುವುದು ಎಂಸಿಜಿಯಲ್ಲಿ ಭಾರತ ತಂಡದ ಇದುವರೆಗಿನ ಟಾಪ್ ಸ್ಕೋರ್‌ ಆಗಿದೆ.

- Advertisement -

ಈ ಮೈದಾನದಲ್ಲಿ ಭಾರತವು ಒಟ್ಟು  4 ಟಿ20 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆಲುವು ಮತ್ತು 1ಪಂದ್ಯದಲ್ಲಿ ಸೋತಿದೆ. 1 ಪಂದ್ಯವು ಡ್ರಾದಲ್ಲಿ ಅಂತ್ಯಕಂಡಿತ್ತು. ಮತ್ತೊಂದೆಡೆ ಪಾಕಿಸ್ತಾನವು 2010ರಲ್ಲಿ ಎಂಸಿಜಿಯಲ್ಲಿ ಕೇವಲ 1 ಪಂದ್ಯವನ್ನು ಆಡಿದ್ದು,  ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.

ಅಂತಿಮ ಪ್ಲೇಯಿಂಗ್‌ XI

ಭಾರತ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್‌ ಕಾರ್ತಿಕ್ (ವಿಕೆಟ್‌ ಕೀಪರ್‌), ಅಕ್ಷರ್ ಪಟೇಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್‌ಸಿಂಗ್, ಮುಹಮ್ಮದ್ ಶಮಿ

ಪಾಕಿಸ್ತಾನ XI: ಬಾಬರ್ ಅಝಮ್, ಮುಹಮ್ಮದ್ ರಿಜ್ವಾನ್, ಶಾನ್ ಮಸೂದ್, ಶಾದಾಬ್ ಖಾನ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಮುಹಮ್ಮದ್ ನವಾಝ, ಆಸಿಫ್ ಅಲಿ, ಶಾಹಿನ್ ಅಫ್ರಿದಿ, ನಸೀಮ್ ಶಾ, ಹಾರಿಸ್ ರೌಫ್



Join Whatsapp