ಟಿ20 ವಿಶ್ವಕಪ್ | ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ

Prasthutha|

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸೂಪರ್ 12 ಹಂತದ ಪಂದ್ಯದಲ್ಲಿ ಭಾರತವಿಂದು ಬಾಂಗ್ಲಾದೇಶವನ್ನು ರೋಚಕ 5 ರನ್ನುಗಳಿಂದ ಮಣಿಸಿದೆ. ಆ ಮೂಲಕ ಗ್ರೂಪ್2 ರ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

- Advertisement -

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಭಾರತ ತನ್ನ ಪಾಳಿಯ 20 ಓವರ್ ಗಳಿಂದ 6 ವಿಕೆಟ್ ಗಳನ್ನು ಕಳೆದುಕೊಂಡು184 ರನ್ ಗಳಿಸಿತ್ತು.

ಕಠಿಣ ಗುರಿ ಮುಂದಿಟ್ಟು ಅಂತಿಮ ಓವರ್‌ ವರೆಗೂ ಹೋರಾಡಿದ ಭಾರತ ಟಿ20 ವಿಶ್ವಕಪ್‌ ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು  5 ರನ್‌ಗಳಿಂದ ರೋಚಕವಾಗಿ ಮಣಿಸಿದೆ.   

- Advertisement -

ಅಡಿಲೇಡ್‌ ಓವಲ್‌ ಮೈದಾನದಲ್ಲಿ  ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ, 6 ವಿಕೆಟ್‌ ನಷ್ಟದಲ್ಲಿ 184 ರನ್‌ ಗಳಿಸಿತ್ತು. ಚೇಸಿಂಗ್‌ ವೇಳೆ ಬಾಂಗ್ಲಾದೇಶ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 66 ರನ್‌ ಗಳಿಸಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ತಾತ್ಕಾಲಿವಾಗಿ ಮುಂದೂಡಲಾಗಿತ್ತು. 

ಬಳಿಕ ಪಂದ್ಯ ಆರಂಭವಾದಗ 16 ಓವರ್‌ಗಳಲ್ಲಿ 151 ರನ್‌ಗಳಿಸಬೇಕಾದ ಗುರಿಯನ್ನು ಬಾಂಗ್ಲಾ ಪಡೆಗೆ ನೀಡಲಾಗಿತ್ತು. ಆದರೆ ಅಂತಿಮ ಓವರ್‌ವರೆಗೂ ರೋಚಕತೆ ಉಳಿಸಿಕೊಂಡ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್‌ ನಷ್ಟದಲ್ಲಿ 145 ರನ್‌ಗಳಿಸಲಷ್ಟೇ ಶಕ್ತವಾಯಿತು

Join Whatsapp