ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ತಂಡವಾಗಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ಸಿಡ್ನಿಯಲ್ಲಿ ನಡೆದ ಸೂಪರ್ 12ರ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಾಸ್ ಬಟ್ಲರ್ ಬಳಗ 4 ವಿಕೆಟ್’ಗಳ ರೋಚಕ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ, 8 ವಿಕೆಟ್ ನಷ್ಟದಲ್ಲಿ 141 ರನ್’ಗಳಸಲಷ್ಟೇ ಶಕ್ತವಾಗಿತ್ತು. ಆದರೆ ಮಳೆ ಮತ್ತು ಪ್ರಮುಖವಾಗಿ ರನ್ರೇಟ್ ವಿಚಾರದಲ್ಲಿ ಎಚ್ಚರ ವಹಿಸಿದ್ದ ಇಂಗ್ಲೆಂಡ್, ಆರಂಭದಲ್ಲೇ ಬಿರುಸಿನ ಹೊಡೆತಗಳಿಗೆ ಮುಂದಾಗಿತ್ತು 7 ಓವರ್’ಗಳು ಕಳೆಯುವಷ್ಟರಲ್ಲಿ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 74 ರನ್’ಗಳಾಗಿತ್ತು.
ಆರಂಭಿಕರಾದ ನಾಯಕ ಜಾಸ್ ಬಟ್ಲರ್ 28 ಮತ್ತು ಅಲೆಕ್ಸ್ ಹೇಲ್ಸ್ 47 ರನ್ಗಳಿಸಿದರು. ಇವರಿಬ್ಬರ ವಿಕೆಟ್ ಪಡೆದ ವನಿಂದು ಹಸರಂಗ ಪಂದ್ಯಕ್ಕೆ ತಿರುವುಕೊಟ್ಟರು. ನಂತರ ಇಂಗ್ಲೆಂಡ್ ಕೆಲ ಎಸೆತಗಳ ಅಂತರದಲ್ಲೇ 4 ವಿಕೆಟ್ ಕಳೆದುಕೊಂಡಿತ್ತು. ಅದಾಗಿಯೂ ಬೆನ್ ಸ್ಟೋಕ್ಸ್ ಜವಾಬ್ದಾರಿಯುತ ಇನ್ನಿಂಗ್ಸ್ ( 42 ರನ್ 36ಎಸೆತ) ತಂಡವನ್ನು ಸೆಮಿಫೈನಲ್’ಗೆ ಕೊಂಡೊಯ್ಯಿತು.
ಲಂಕಾ ಇನ್ನಿಂಗ್ಸ್’ನಲ್ಲಿ ಕನಿಷ್ಠ 10ರಿಂದ 15 ರನ್ ಅಧಿಕವಾಗಿ ಗಳಿಸುತ್ತಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು.
ಸಿಡ್ನಿಯಲ್ಲಿ ಶ್ರೀಲಂಕಾ ತಾನು ಸೋಲುವುದಲ್ಲದೆ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಅಭಿಯಾನಕ್ಕೂ ಅಂತ್ಯ ಹಾಡಿದೆ.
ಸೂಪರ್12ರ ಗ್ರೂಪ್ 1ರಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸಮಾನ ಅಂಕಗಳನ್ನು (7) ಹೊಂದಿದೆ. ಅದಾಗಿಯೂ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ (+2.113) ಇಂಗ್ಲೆಂಡ್ ತಂಡಗಳು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ನಿರಾಸೆಯಿಂದಲೇ ಹೊರನಡೆದಿದೆ. ಸೆಮಿಫೈನಲ್’ಗೆ ಇಂಗ್ಲೆಂಡ್, ನ್ಯೂಜಿಲೆಂಡ್
ಸೂಪರ್12ರ ಗ್ರೂಪ್ 1ರಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಸಮಾನ ಅಂಕಗಳನ್ನು (7) ಹೊಂದಿವೆ. ಅದಾಗಿಯೂ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ (+2.113) ಇಂಗ್ಲೆಂಡ್ (+0.473) ತಂಡಗಳು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯ (-173) ನಿರಾಸೆಯಿಂದಲೇ ಹೊರನಡೆದಿದೆ.
ಸೂಪರ್ 12 ಹಂತದ ಗ್ರೂಪ್ 1ರ ಎಲ್ಲಾ ಪಂದ್ಯಗಳು ಮುಕ್ತಾಯಕಂಡಿದೆ. ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್, (3 ಗೆಲುವು, 1 ಸೋಲು) 7 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದೆ.