T20 World Cup: ಬಾಂಗ್ಲಾ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ

Prasthutha|

ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಅಫ್ಗಾನಿಸ್ತಾನ

- Advertisement -

ವಿನ್ಸೆಂಟ್: ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅಫ್ಗಾನಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.


ಟಿ20 ವಿಶ್ವಕಪ್ನಲ್ಲಿ ಇಂದು ನಡೆದ ಕೊನೆಯ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅದೃಷ್ಟ ಕೈಹಿಡಿದ ಪರಿಣಾಮ ಮೊದಲ ಬಾರಿಗೆ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಅಫ್ಗಾನಿಸ್ತಾನ 20 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು 115 ರನ್ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ದೇಶ 105 ರನ್ಗಳಿಗೆ ಸರ್ವಪತನವಾಯಿತು.
ಅಫ್ಗಾನಿಸ್ತಾನ ಪರ ಗುರ್ಬಜ್ 43 ರನ್ ಹೊಡೆದು ಗಮನ ಸೆಳೆದರು. ರಶೀದ್ ಖಾನ್ 19 ರನ್ ಹೊಡೆದರು. ಉಳಿದ ಆಟಗಾರರು ಅಲ್ಪ ಮೊತ್ತಕೆ ಔಟ್ ಆದರು. ಬಾಂಗ್ಲಾದೇಶದ ಪರ ರಶೀದ್ ಹೊಸೇನ್ 3 ವಿಕೆಟ್ ಪಡೆದರು.

- Advertisement -


ಅಫ್ಗಾನಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ ಪಡೆ 105 ರನ್ ಪೇರಿಸಲು ಪರದಾಡಿತು. ಲಿಟನ್ ದಾಸ್ ಮಾತ್ರ 54 ರನ್ ಹೊಡೆದು ಗಮನ ಸೆಳೆದರು. ಅಫ್ಗನ್ ಪಡೆಯ ನವೀನ್, ರಶೀದ್ ಖಾನ್ ತಲಾ 4 ವಿಕೆಟ್ ಪಡೆದರು.

Join Whatsapp