ಟಿ20 ವಿಶ್ವಕಪ್ 2024: 15 ಸದಸ್ಯರ ತಂಡ ಪ್ರಕಟಿಸಿದ ಪಾಕಿಸ್ತಾನ

Prasthutha|

ಇಸ್ಲಾಮಾಬಾದ್: ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಟಿ20 ವಿಶ್ವಕಪ್ 2024 ಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಎಲ್ಲಾ ತಂಡಗಳು ಈಗಾಗಲೇ ತಂಡವನ್ನು ಪ್ರಕಟಿಸಿದ್ದರೂ, ಪಾಕಿಸ್ತಾನ ಮಾತ್ರ ಇನ್ನೂ ತಂಡವನ್ನು ಪ್ರಕಟಿಸಿರಲಿಲ್ಲ.

- Advertisement -

ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮೆಗಾ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವನ್ನು ಬಾಬರ್ ಅಜಮ್ ಮುನ್ನಡೆಸಲಿದ್ದಾರೆ. ತಂಡದ ಉಪನಾಯಕ ಯಾರು ಎನ್ನುವುದನ್ನು‌ ಪಿಸಿಬಿ ಇನ್ನೂ ಸ್ಪಷ್ಟಪಡಿಸಿಲ್ಲ.

ಭುಜದ ಗಾಯದಿಂದಾಗಿ ಜನವರಿ 19ರಿಂದ ಯಾವುದೇ ಪಂದ್ಯವನ್ನು ಆಡಿರದ ವೇಗದ ಬೌಲರ್ ಹ್ಯಾರಿಸ್ ರೌಫ್ ತಂಡಕ್ಕೆ ಮರಳಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ತಂಡದಲ್ಲಿ ಅವಕಾಶ ಪಡೆದಿರುವ ಸಲ್ಮಾನ್ ಅಲಿ ಅಘಾ, ಹಸನ್ ಅಲಿ ಮತ್ತು ಮೊಹಮ್ಮದ್ ಇರ್ಫಾನ್ ಟಿ20 ವಿಶ್ವಕಪ್‌ ತಂಡದಿಂದ ಹೊರಗುಳಿದಿದ್ದಾರೆ.

- Advertisement -

ಜೂನ್ 6ರಂದು ಯುಎಸ್‌ಎ ವಿರುದ್ಧ ಪಂದ್ಯವನ್ನಾಡುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.

ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.

ಜೂನ್ 9 ರಂದು ಭಾರತ-ಪಾಕಿಸ್ತಾನ ಪಂದ್ಯ, ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಜೂನ್ 11ರಂದು ಕೆನಡಾ ವಿರುದ್ಧ ಆಡಲಿರುವ ಪಾಕಿಸ್ತಾನ, ಲೀಗ್ ಹಂತದ ಪಾಕಿಸ್ತಾನದ ಕೊನೆಯ ಪಂದ್ಯದಲ್ಲಿ ಜೂನ್ 16ರಂದು ಐರ್ಲೆಂಡ್ ತಂಡದ ವಿರುದ್ಧ ಸೆಣೆಸಲಿದೆ.

Join Whatsapp