ದುಬೈ: 15ನೇ ಆವೃತ್ತಿಯ ಏಷ್ಯಾ ಕಪ್ ಟಿ20 ಟೂರ್ನಿಗೆ ಶನಿವಾರ ದುಬೈನಲ್ಲಿ ಚಾಲನೆ ದೊರೆಯಲಿದೆ. ಆರು ರಾಷ್ಟ್ರಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ–ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಪೂರ್ವ ನಿಗದಿಯಂತೆ ಈ ಬಾರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ದ್ವೀಪರಾಷ್ಟ್ರದಲ್ಲಿ ತಲೆದೋರಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಟೂರ್ನಿ ಯುಎಇಗೆ ಸ್ಥಳಾಂತರವಾಗಿದೆ. ಆಗಸ್ಟ್ 28ರ ಭಾನುವಾರದಂದು ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿರುವ ಭಾರತ- ಪಾಕಿಸ್ತಾನ ತಂಡಗಳ ನಡುವಿನ ʻಹೈವೋಲ್ಟೇಜ್ʼ ಕದನ ನಡೆಯಲಿದೆ.
ಭಾರತ, ಪಾಕಿಸ್ತಾನ, ಹಾಂಕಾಂಗ್ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ಗ್ರೂಪ್ ʻಬಿʼಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳಿವೆ. ಅರ್ಹತಾ ಸುತ್ತಿನ ಫೈನಲ್ನಲ್ಲಿ ಆತಿಥೇಯ ಯುಎಇ ತಂಡವನ್ನು ಮಣಿಸಿ ಹಾಂಕಾಂಗ್ ತಂಡ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದೆ. ಗ್ರೂಪ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲಿದೆ.
ಏಷ್ಯಾ ಕಪ್ 2022 ಸಂಪೂರ್ಣ ವೇಳಾಪಟ್ಟಿ:
ಗುಂಪು ಹಂತ, ಸೂಪರ್-4 , ಫೈನಲ್ ಸೇರಿದಂತೆ ಏಷ್ಯಾಕಪ್ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದೆ. ಆಗಸ್ಟ್ 27ಕ್ಕೆ ಆರಂಭವಾಗುವ ಟೂರ್ನಿ ಸೆಪ್ಟಂಬರ್ 11ರಂದು ಕೊನೆಗೊಳ್ಳಲಿದೆ.
ಆಗಸ್ಟ್ 27: ಶ್ರೀಲಂಕಾ vs ಅಫ್ಘಾನಿಸ್ತಾನ. ದುಬೈ ಸ್ಟೇಡಿಯಂ
ಆಗಸ್ಟ್ 28: ಭಾರತ vs ಪಾಕಿಸ್ತಾನ. ದುಬೈ ಸ್ಟೇಡಿಯಂ
ಆಗಸ್ಟ್ 30: ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಶಾರ್ಜಾ ಸ್ಟೇಡಿಯಂ
ಆಗಸ್ಟ್ 31: ಭಾರತ vs ಹಾಂಗ್ ಕಾಂಗ್, ದುಬೈ ಸ್ಟೇಡಿಯಂ
ಸೆಪ್ಟೆಂಬರ್ 1: ಶ್ರೀಲಂಕಾ vs ಬಾಂಗ್ಲಾದೇಶ. ದುಬೈ ಸ್ಟೇಡಿಯಂ
ಸೆಪ್ಟೆಂಬರ್ 2: ಪಾಕಿಸ್ತಾನ vs ಹಾಂಕಾಂಗ್. ಶಾರ್ಜಾ ಸ್ಟೇಡಿಯಂ
ಸೂಪರ್- 4 ವೇಳಾಪಟ್ಟಿ:
ಸೆಪ್ಟೆಂಬರ್ 3: B1 vs B2 , ಶಾರ್ಜಾ ಸ್ಟೇಡಿಯಂ
ಸೆಪ್ಟೆಂಬರ್ 4: A1 vs A2, ದುಬೈ ಸ್ಟೇಡಿಯಂ
ಸೆಪ್ಟೆಂಬರ್ 6: A1 vs B1 , ದುಬೈ ಸ್ಟೇಡಿಯಂ
ಸೆಪ್ಟೆಂಬರ್ 7: A2 vs B2 , ದುಬೈ ಸ್ಟೇಡಿಯಂ
ಸೆಪ್ಟೆಂಬರ್ 8: A1 vs B2 , ದುಬೈ ಸ್ಟೇಡಿಯಂ
ಸೆಪ್ಟೆಂಬರ್ 9: B1 vs A2 , ದುಬೈ ಸ್ಟೇಡಿಯಂ
ಸೆಪ್ಟೆಂಬರ್ 11: ಫೈನಲ್ ಪಂದ್ಯ , ದುಬೈ ಸ್ಟೇಡಿಯಂ