ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಜೆಡಿಎಸ್ ಟಿ.ಎ.ಶರವಣ ಅವರಿಗೆ ಟಿಕೆಟ್ ನೀಡಿದೆ.
ಈ ಮೂಲಕ ಶರವಣ ಎರಡನೇ ಬಾರಿಗೆ ಮೇಲ್ಮನೆ ಪ್ರವೇಶಿಸಲು ಹಾದಿ ಸುಗಮವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ಮಾಜಿ ಸಿಎಂ. ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿಂದು ಟಿ.ಎ.ಶರವಣ ಹೆಸರು ಅಂತಿಮಗೊಳಿಸಿ, ಬಿಫಾರಂ ನೀಡಿದರು.
ಈ ವೇಳೆ ಶರವಣ ಅವರು ಎಚ್ ಡಿಕೆ ಹಾಗೂ ಸಿಎಂ ಇಬ್ರಾಹಿಂ ಕಾಲಿಗೆ ನಮಸ್ಕರಿಸಿದರು.
ಮೇಲ್ಮನೆ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ಕಣಕ್ಕೆ
Prasthutha|