ಟಿ-20 ವಿಶ್ವಕಪ್: ಭಾರತಕ್ಕೆ 111 ರನ್‌ಗಳ ಸುಲಭ ಗುರಿ ನೀಡಿದ ಅಮೆರಿಕ

Prasthutha|

ನ್ಯೂಯಾರ್ಕ್: ಇಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್‌ನ ಭಾರತ- ಅಮೆರಿಕ ತಂಡಗಳ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಅಮೆರಿಕ ಅಮೆರಿಕ110 ರನ್‌ಗಳನ್ನಷ್ಟೇ ಕಲೆಹಾಕಿದೆ.

- Advertisement -

ಬೌಲಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿ ನಿತೀಶ್ ಕುಮಾರ್ 27 ಮತ್ತು ಸ್ಟೀವನ್ ಟೇಲರ್ 24 ರನ್ ಗಳಿಸಿದರು. ಕೋರೆ ಅಂಡರ್ಸನ್ 15 ರನ್ ಸಿಡಿಸಿದರೆ, ಉಳಿದ ಬ್ಯಾಟರ್‌ಗಳಿಂದ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು.

ಭಾರತದ ಪರ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 9 ರನ್ ನೀಡಿ 4 ವಿಕೆಟ್ ಕಬಳಿಸಿ ಅತ್ಯುತ್ತಮ ಬೌಲಿಂಗ್ ಸಂಘಟಿಸಿದರು. ಹಾರ್ದಿಕ್ ಪಾಡ್ಯ ಕೂಡ 14 ರನ್‌ಗೆ 2 ವಿಕೆಟ್ ಪಡೆದರು.

- Advertisement -

20 ಓವರ್ ಅಂತ್ಯಕ್ಕೆ ಅಮೆರಿಕ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೂಪರ್-8ಗೆ ಲಗ್ಗೆ ಇಡಲಿದೆ.

Join Whatsapp