ಸುಟ್ಟು ಕರಕಲಾಗಿದ್ದ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯಕ್ಕೆ ಜೀವಕಳೆ

Prasthutha|

ಮೈಸೂರು: ಸುಟ್ಟು ಕರಕಲಾಗಿದ್ದ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ಮರು ನಿರ್ಮಾಣಗೊಂಡಿದ್ದು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಗ್ರಂಥಾಲಯವನ್ನು ಉದ್ಘಾಟಿಸಿದರು.

- Advertisement -

ಉದಯಗಿರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪಿ.ಕೆ.ರಾಜು ಅವರ ತಂಡ 50 ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು. ಸುತ್ತೂರು ಶ್ರೀಗಳು ಗ್ರಂಥಾಲಯ ಉದ್ಘಾಟನೆಯ ಹಿಂದಿನ ದಿನ 200ಕ್ಕೂ ಹೆಚ್ಚು ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದರು. ಸದ್ಯ ಗ್ರಂಥಾಲಯದಲ್ಲಿ 2,150 ಪುಸ್ತಕಗಳಿವೆ. ಗ್ರಂಥಾಲಯ ಗೋಡೆಯಲ್ಲಿ ಕನ್ನಡದ ನುಡಿಮುತ್ತುಗಳು, ಘೋಷಣೆ ಫಲಕ ಅಳವಡಿಸಲಾಗಿದೆ. ಕನ್ನಡ ಸಾಹಿತಿಗಳು, ಸಾಧಕರ ಭಾವಚಿತ್ರಗಳನ್ನು ಹಾಕಲಾಗಿದೆ.

ಗ್ರಂಥಾಲಯ ಸ್ಥಾಪಕ ಸೈಯದ್ ಇಸಾಕ್ ಮಾತನಾಡಿ, ಕಳೆದ ವರ್ಷ ಗ್ರಂಥಾಲಯ ಸುಟ್ಟು ಹೋಯಿತು. ಸರ್ಕಾರದ ಆಶ್ವಾಸನೆ ಈಡೇರಲಿಲ್ಲ. ಜನ ಕೊಟ್ಟ ಹಣದಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ. ಇಲ್ಲಿಗೆ ಅಪಾರ ಮಕ್ಕಳು ಹಾಗೂ ಸಾರ್ವಜನಿಕರು ಓದಲು ಬರುತ್ತಾರೆ. ಹಾಗಾಗಿ ಆದಷ್ಟು ಬೇಗ ಶಾಶ್ವತ ಗ್ರಂಥಾಲಯ ಕಟ್ಟಡ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.



Join Whatsapp