ಇಸ್ಲಾಮಾಬಾದ್: ನೂತನ ಪ್ರಧಾನಿ ಶೆಹಬಾಜ್ ಶರೀಫ್ ನೇತೃತ್ವದ ಹೊಸ ಸಂಪುಟವು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿತು.
ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಲ್ವಿಯವರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಕ್ಷಮೆ ಕೋರಿದ್ದು, ಸೆನೆಟ್ ನ ಚೇರ್ಮನ್ ಸಾದಿಕ್ ಸಂಜ್ರಾನಿಯವರು ಪಾಕಿಸ್ತಾನದ ಹೊಸ ಮಂತ್ರಿ ಮಂಡಳದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಪಾಕಿಸ್ತಾನದ ಸಮಯ ಬೆಳಿಗ್ಗೆ 8:30ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಿತು. ಪ್ರಧಾನಿ ಶರೀಫ್ ಅವರು ಅಧ್ಯಕ್ಷರ ಕಚೇರಿಗೆ ಫೋನ್ ಮಾಡಿ ಕರೆದಾಗ ಅವರು ಬರಲು ನಿರಾಕರಿಸಿದರು ಎಂದು ಜಿಯೋ ಟೀವಿ ವರದಿ ಮಾಡಿದೆ.
ಸೆನೆಟ್ ಚೇರ್ಮನ್ ರನ್ನು ಕರೆಸಲಾಯಿತು. ಸಹ ಅಧ್ಯಕ್ಷರಾಗಿ ಅವರು ಮಂತ್ರಿ ಮಂಡಳಕ್ಕೆ ಪ್ರಮಾಣವಚನ ಬೋಧಿಸಿದರು.