ನಾಯಿಗೆ ಹೆದರಿ 3ನೇ ಮಹಡಿಯಿಂದ ಬಿದ್ದು ಸ್ವಿಗ್ಗಿ ಡೆಲಿವರಿ ಬಾಯ್ ಮೃತ್ಯು: ಮಾಲೀಕನ ವಿರುದ್ಧ FIR

Prasthutha|

ಹೈದರಾಬಾದ್: ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನನ್ನು ನಾಯಿ ಬೆನ್ನಟ್ಟಿ ಸಾಯಿಸಿದ ಘಟನೆ ಹೈದರಾಬಾದ್’ನಲ್ಲಿ ನಡೆದಿದ್ದು, ನಾಯಿ ಮಾಲೀಕ ಶೋಬನಾ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

- Advertisement -


ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಮುಹಮ್ಮದ್ ರಿಝ್ವಾನ್ (23) ಮೃತಪಟ್ಟವರು.


ಕಳೆದ ಮೂರು ವರ್ಷಗಳಿಂದ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ರಿಝ್ವಾನ್ ಬಂಜಾರಾ ಹಿಲ್ಸ್’ನಲ್ಲಿರುವ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್ಮೆಂಟ್’ನ ಮೂರನೇ ಮಹಡಿಗೆ ಪಾರ್ಸೆಲ್ ತಲುಪಿಸಲು ಹೋಗಿದ್ದರು
ಈ ವೇಳೆ, ಗ್ರಾಹಕ ಶೋಬನಾ ಮನೆಯ ಬಾಗಿಲು ತೆರೆಯುತ್ತಿದ್ದಂತೇ ಅಲ್ಲೇ ಇದ್ದ ನಾಯಿ (ಜರ್ಮನ್ ಶೆಫರ್ಡ್) ಹಠಾತ್ತನೆ ರಿಝ್ವಾನ್ ಮೇಲೆ ದಾಳಿ ಮಾಡಿದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ರಿಝ್ವಾನ್ ಮೂರನೇ ಮಹಡಿಯಿಂದ ಜಿಗಿದಿದ್ದು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ನಿಮ್ಸ್) ದಾಖಲಿಸಲಾಗಿತ್ತು.
ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾರೆ

- Advertisement -


ರಿಝ್ವಾನ್ ಅವರ ಸಹೋದರ ಮುಹಮ್ಮದ್ ಖಾಜಾ ಅವರು ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಬಂಜಾರಾ ಹಿಲ್ಸ್ ಪೊಲೀಸರು ಶೋಭನಾ ವಿರುದ್ಧ ಸೆಕ್ಷನ್ 336 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



Join Whatsapp