ಸ್ವಾತಿ ಮಾಲಿವಾಲ್ ಮೇಲೆ ಹಲ್ಲೆ ನಡೆದಿರುವುದು ದೃಢ: ವೈದ್ಯಕೀಯ ವರದಿ

Prasthutha|

ನವದೆಹಲಿ: ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರ ಮೇಲೆ ಹಲ್ಲೆ ನಡೆದಿರುವುದು ಖಚಿತಪಟ್ಟಿದೆ ಎಂದು ಏಮ್ಸ್ ವೈದ್ಯರು ವೈದ್ಯಕೀಯ ವರದಿ ನೀಡಿದ್ದಾರೆ.

- Advertisement -

ಶನಿವಾರ ಸ್ವಾತಿ ಮಾಲಿವಾಲ್ ಅವರ ವೈದ್ಯಕೀಯ ವರದಿ ಬಂದಿದ್ದು, ಅದರ ಪ್ರಕಾರ ಎಡಗಾಲಿಗೆ ಮತ್ತು ಬಲ ಕೆನ್ನೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ.


‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಭಿಭವ್ ಕುಮಾರ್ ನನಗೆ ಹಲವು ಬಾರಿ ಬಲವಾಗಿ ಒದ್ದಿದ್ದಲ್ಲದೇ, ಏಳೆಂಟು ಬಾರಿ ಕಪಾಳಕ್ಕೂ ಹೊಡೆದಿದ್ದಾನೆ’ ಎಂದು ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರು ಆರೋಪಿಸಿದ್ದಾರೆ.



Join Whatsapp