ಮಠದ ಬಾವಿಗೆ ಬಿದ್ದು ಸ್ವಾಮೀಜಿ ಆಪ್ತ ಸಹಾಯಕನ ಪತ್ನಿ ಮೃತ್ಯು

Prasthutha|

ಚಿತ್ತಾಪುರ: ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರ ಆಪ್ತಸಹಾಯಕನ ಪತ್ನಿ ಮಠದ ಆವರಣದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ದಿಗ್ಗಾಂವ ಗ್ರಾಮದಲ್ಲಿ ನಡೆದಿದೆ.

- Advertisement -

ಭೂಮಿಕಾ ಶರಣಪ್ಪ ಊಡಗಿ (26) ಮೃತಪಟ್ಟರು ಎಂದು ಗುರುತಿಸಲಾಗಿದೆ. ಭೂಮಿಕಾ ದಿಗ್ಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕಿ ಆಗಿದ್ದರು.

ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಹೋದ ಭೂಮಿಕಾ ವಾಪಸ್‌ ಬರಲಿಲ್ಲ. ಅತ್ತ ಶಾಲೆಗೂ ಹೋಗಿರಲಿಲ್ಲ. ಈ ಬಗ್ಗೆ ಮನೆಯ ಅಕ್ಕಪಕ್ಕದವರನ್ನು ವಿಚಾರಿಸಿದಾಗ, ಮಠದ ಹತ್ತಿರ ಹೋಗಿರುವ ವಿಷಯ ತಿಳಿಯಿತು. ಮಠದ ಆವರಣದಲ್ಲಿರುವ ಬಾವಿಯ ಬಳಿ ಅವರ ಚಪ್ಪಲಿಗಳು ಪತ್ತೆಯಾದವು. ಅಲ್ಲದೇ, ಬಾವಿಗೆ ಅಳವಡಿಡಿದ್ದ ತಂತಿ ಜಾಳಿಗೆ ಕೂಡ ತೆರೆದುಕೊಂಡಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯರು ಹುಡುಕಿದಾಗ ಭೂಮಿಕಾ ಶವ ಬಾವಿಯಲ್ಲಿ ಪತ್ತೆಯಾಗಿದೆ,

- Advertisement -

ಈ ಬಗ್ಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  




Join Whatsapp