ಸಮಾಜವಾದಿ ಪಕ್ಷ ತೊರೆದು ಹೊಸ ಪಕ್ಷ ಆರಂಭಿಸಿದ ಸ್ವಾಮಿ ಪ್ರಸಾದ್ ಮೌರ್ಯ

Prasthutha|

ದೆಹಲಿ: ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಸಮಾಜವಾದಿ ಪಕ್ಷದ (SP) ಮಾಜಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ದೆಹಲಿಯಲ್ಲಿ ತಮ್ಮ ಹೊಸ ರಾಜಕೀಯ ಪಕ್ಷ ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷ (RSSP) ಅನ್ನು ಪ್ರಾರಂಭಿಸಿದ್ದಾರೆ.

- Advertisement -


ಮೌರ್ಯ ಅವರು ತಮ್ಮ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷದೊಂದಿಗೆ ಸಂಬಂಧವನ್ನು ಕಡಿದುಕೊಂಡ ಕೆಲವು ದಿನಗಳ ನಂತರ ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷ ಆರಂಭಿಸಿದ್ದಾರೆ.


ಫೆಬ್ರವರಿ 20 ರಂದು, ಮೌರ್ಯ ಸಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಗೆ ರಾಜೀನಾಮೆ ನೀಡಿ ಹೊಸ ಪಕ್ಷವನ್ನು ರಚಿಸುವುದಾಗಿ ಘೋಷಿಸಿದರು.

Join Whatsapp