ಜ್ಞಾನವಾಪಿ ಮಸೀದಿಯೊಳಗಡೆ ಪೂಜೆ ನಡೆಸದೆ ಅನ್ನ ನೀರು ಮುಟ್ಟುವುದಿಲ್ಲ ಎಂದ ಸ್ವಾಮಿ ಅವಿಮುಕ್ತೇಶ್ವರಾನಂದ

Prasthutha|

ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ನ್ಯಾಯಾಲಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಹೇಳಿದ್ದು . ಶ್ರೀ ವಿದ್ಯಾಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಜ್ಞಾನವಾಪಿ ಮಸೀದಿ ಒಳಗಡೆ ಪೂಜೆ ಸಲ್ಲಿಸುವುದಾಗಿ ಸ್ವಾಮೀಜಿ ಘೋಷಣೆ ಮಾಡಿದ್ದರು. ಹೀಗಾಗಿ ವಾರಣಾಸಿ ಪೊಲೀಸರು ಸ್ವಾಮೀಜಿಯನ್ನು ಮಠದಿಂದ ಹೊರಬರದಂತೆ ತಡೆದರು.

- Advertisement -

ಸ್ವಾಮೀಜಿ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಸೀದಿಯಲ್ಲಿ ಪೂಜೆ ಮಾಡುತ್ತೇನೆಂದು ತಿಳಿಸಿದ್ದು, ಪೊಲೀಸರ ಕ್ರಮದಿಂದ ಅಸಮಾಧಾನಗೊಂಡ ಸ್ವಾಮೀಜಿ ತಮಗೆ ಪೂಜೆ ನಡೆಸಲು ಅವಕಾಶ ನೀಡುವವರೆಗೆ ಅನ್ನ ನೀರು ಮುಟ್ಟುವುದಿಲ್ಲ, ಪೂಜೆ ಅರ್ಪಿಸಿದ ನಂತರವೇ ಬಾಯಲ್ಲಿ ನೀರು ಹಾಕುತ್ತೇನೆ ಎಂದು ಹೇಳಿದರು

ನ್ಯಾಯಾಲಯದ ನಿರ್ಣಯಕ್ಕೆ ನಾವು ಬದ್ಧರಾಗಿರುತ್ತೇವೆ ಆದರೆ ಕೋರ್ಟ್ ತೀರ್ಪು ನೀಡುವವರೆಗೆ ದೇವರು ಹಸಿವು ಮತ್ತು ನೀರಿನ ದಾಹದಿಂದ ಬಳಲಬೇಕೇ? ನಮಗೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ಸ್ವಾಮೀಜಿ ಮಾಧ್ಯಮಗಳಿಗೆ ಹೇಳಿದರು.

Join Whatsapp