ಪತ್ನಿ ಮೇಲೆ ಸಂಶಯ: ಮಕ್ಕಳಿಬ್ಬರನ್ನು ಹತ್ಯೆ ಮಾಡಿದ ತಂದೆ

Prasthutha|

ದೇವದುರ್ಗ (ರಾಯಚೂರು ಜಿಲ್ಲೆ): ಜಕ್ಕೇರದೊಡ್ಡಿ ಗ್ರಾಮದ ನಿಂಗಪ್ಪ ಎಂಬಾತ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯಗೊಂಡು ಇಬ್ಬರು ಮಕ್ಕಳನ್ನು ಶನಿವಾರದಂದು ಕತ್ತು ಹಿಸುಕಿ ಕೊಂದಿದ್ದಾನೆ.

- Advertisement -

ಶಿವರಾಜ ನಿಂಗಪ್ಪ (5), ರಾಘವೇಂದ್ರ ನಿಂಗಪ್ಪ (3) ಕೊಲೆಯಾದ ಮಕ್ಕಳು. ‘ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ. ಮಕ್ಕಳಿಬ್ಬರು ನನಗೆ ಹುಟ್ಟಿಲ್ಲ ಎಂದು ನಿಂಗಪ್ಪ ಪತ್ನಿಯನ್ನು ನಿಂದಿಸಿ ಕೆ.ಇರಬಗೇರಾ ಗ್ರಾಮದಲ್ಲಿದ್ದ ಮಕ್ಕಳಿಬ್ಬರನ್ನು ಜಕ್ಕೇರದೊಡ್ಡಿಗೆ ಕರೆತಂದು ಕತ್ತು ಹಿಸುಕಿ ಸಾಯಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಶನಿವಾರ ಮಧ್ಯರಾತ್ರಿಯೇ ದೇವದುರ್ಗ ಪೊಲೀಸ್ ಠಾಣೆಗೆ ತೆರಳಿ ಪತಿ ನಿಂಗಪ್ಪನ ವಿರುದ್ಧ ಪತ್ನಿ ಪ್ರಭಾವತಿ ದೂರು ಸಲ್ಲಿಸಿದ್ದಾರೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



Join Whatsapp