ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ನವದೆಹಲಿಯಿಂದ ಸ್ಪರ್ಧೆ

Prasthutha|

ನವದೆಹಲಿ: ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಹೆಸರಾಂತ ವಕೀಲರಾದ ಬಾನ್ಸುರಿ ಸ್ವರಾಜ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ನೀಡಿದೆ.

- Advertisement -

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ, ತಮ್ಮ ಹೆಸರು ಘೋಷಣೆಯಾಗಿದ್ದಕ್ಕೆ ಸಂಸತ ವ್ಯಕ್ತಪಡಿಸಿರುವ ಬಾನ್ಸುರಿ ಸ್ವರಾಜ್‌, ನನ್ನ ತಾಯಿ ಸ್ಥಾಪಿಸಿದ ಪರಂಪರೆಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತೇನೆ. ಅವರು ಸ್ವರ್ಗದಿಂದ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ನನಗೆ ಈ ಅವಕಾಶ ನೀಡಿದ ಪ್ರಧಾನಿ ಮೋದಿ, ಎಚ್‌ಎಂ ಅಮಿತ್ ಶಾ ಜಿ, ಜೆಪಿ ನಡ್ಡಾ ಜಿ ಮತ್ತು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.’ಅಬ್ ಕಿ ಬಾರ್ 400 ಪಾರ್’ ನಿರ್ಣಯದೊಂದಿಗೆ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ‘ಪ್ರಧಾನ ಸೇವಕ’ ಮಾಡಲು ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.



Join Whatsapp