ಗಣರಾಜ್ಯೋತ್ಸವದ ದಿನ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ| ಭಿತ್ತಿಪತ್ರ ಪ್ರದರ್ಶನದ ಮೂಲಕ ರಾಜ್ಯಾದ್ಯಂತ ಬಹಿಷ್ಕರಿಸಿದ ಕ್ಯಾಂಪಸ್ ಫ್ರಂಟ್

Prasthutha|

ಬೆಂಗಳೂರು: ಗಣರಾಜ್ಯೋತ್ಸವದ ದಿನ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ನಡೆಸಬೇಕೆಂದು ಯುಜಿಸಿ ಸುತ್ತೋಲೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI) ರಾಜ್ಯಾದ್ಯಂತ ಕಾಲೇಜುಗಳ ಮುಂಭಾಗ, ವಿವಿಧ ನಗರಗಳಲ್ಲಿ ಭಿತ್ತಿಪತ್ರ ಪ್ರದರ್ಶನದ ಮೂಲಕ ಬಹಿಷ್ಕರಿಸಿದೆ.  

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ, ಗಣರಾಜ್ಯೋತ್ಸವದ ದಿನ ಎಲ್ಲಾ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ನಡೆಸಬೇಕೆಂದು ಯುಜಿಸಿ ಸುತ್ತೋಲೆ ಹೊರಡಿಸಿದ್ದು, ಈ ಮುಖಾಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ತಮ್ಮ ಮತೀಯ ಅಜೆಂಡಾಗಳನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹುದೊಡ್ಡದಿದೆ, ಆದರೆ ಅದನ್ನು ನಿವಾರಿಸಲು ಸರಕಾರಕ್ಕೆ ಆಸಕ್ತಿಯಿಲ್ಲ, ಬದಲಾಗಿ ಸೂರ್ಯ ನಮಸ್ಕಾರದಂತಹ ಮತೀಯ ಅಜೆಂಡಾಗಳನ್ನು ಶೈಕ್ಷಣಿಕ ವಲಯದಲ್ಲಿ ಹೇರಲು ಮುಂದಾಗಿದ್ದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರವಾಗಿದೆಯೆಂದು ಇದನ್ನು ಸಂವಿಧಾನದ ಮೇಲೆ ಭರವಸೆಯಿಟ್ಟಿರುವ ಪ್ರತಿಯೊಬ್ಬರು ವಿರೋಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

- Advertisement -

 “ಹಿಂದುತ್ವದ ಭಾಗವಾಗಿರುವ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸುವ ಮುಖಾಂತರ ಗಣರಾಜ್ಯೋತ್ಸವವನ್ನು ಆಚರಿಸೋಣ” ಎಂಬ ಘೋಷವಾಕ್ಯದಡಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಮುಂಭಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಭಿತ್ತಿಪತ್ರ ಪ್ರದರ್ಶಿಸಿ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸಿದೆ.

Join Whatsapp