ಕೋರ್ಟ್ ಎಫ್ ಡಿಎ ನೇಣಿಗೆ ಶರಣು

Prasthutha|

ಬೆಂಗಳೂರು: ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಆಗಿದ್ದ ಮಹಿಳೆಯೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಇಂದಿರಾನಗರದಲ್ಲಿ ನಡೆದಿದೆ.

- Advertisement -

ಜಿಲ್ಲಾ ನ್ಯಾಯಾಲಯದಲ್ಲಿ ಎಫ್ಡಿಎ ಆಗಿದ್ದ ಆರತಿ ಹಿರೇಮಠ್ (35) ಆತ್ಮಹತ್ಯೆಗೆ ಶರಣಾದವರು.

ಆರತಿ ಅವರ ಪತಿ ರಾಮಕೃಷ್ಣಯ್ಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ನಾಗಸಂದ್ರ ಬಳಿಯ ತಿಪ್ಪೇನಹಳ್ಳಿಯಲ್ಲಿ ಪತಿ ಮಕ್ಕಳೊಂದಿಗೆ ವಾಸವಾಗಿದ್ದು, ಕೆಲಸ ಕಾರಣದಿಂದ ಪತ್ನಿ ಚಿಕ್ಕಬಳ್ಳಾಪುರ ನಗರದ ಇಂದಿರಾ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

- Advertisement -

ಮನೆಯಲ್ಲಿ ಆರತಿ ಆತ್ಮಹತ್ಯೆಗೆ ಶರಣಾಗಿದ್ದು ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ  ಚಿಕ್ಕಬಳ್ಳಾಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp