ನಟ ಸೋನು ಸೂದ್ ಹುಟ್ಟುಹಬ್ಬಕ್ಕೆ ಅಚ್ಚರಿಯ ಗಿಫ್ಟ್ ನೀಡಿದ ಅಭಿಮಾನಿ!

Prasthutha|

ಹೊಸದಿಲ್ಲಿ: ಬಾಲಿವುಡ್ ನಟ ಸೋನು ಸೂದ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವಿಪುಲ್ ಮಿರಾಜ್ಕರ್ ಎಂಬ ಕಲಾವಿದ ವಿನೂತನ ರೀತಿಯಲ್ಲಿ ನಟನಿಗೆ ಶುಭಾಶಯ ತಿಳಿಸಿದ್ದಾರೆ.

- Advertisement -

ಸುಮಾರು 50,000 ಚದರಡಿ ಭೂಮಿಯಲ್ಲಿ ಸೋನು ಸೂದ್ ಅವರ ಭಾವಚಿತ್ರವನ್ನು ಮಾಡುವ ಮುಖಾಂತರ ಕಲಾವಿದ ವಿಪುಲ್ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಇದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಇವರು ‘ಸೋನು ಸೂದ್ ಅಣ್ಣನಿಗೆ ಹುಟ್ಟುಹಬ್ಬದ ಅಚ್ಚರಿಯ ಭಾವಚಿತ್ರ’ ಎಂದು ಬರೆದಿದ್ದಾರೆ.

ನಟನ ಹುಟ್ಟುಹಬ್ಬಕ್ಕೆ ಭವ್ಯವಾದ ಕಲಾಕೃತಿ ಮಾಡುವ ಮೂಲಕ ಶುಭಾಶಯ ಕೋರಲೆಂದು ಮೈದಾನವನ್ನು ಅಗೆದು ಉಳುಮೆ ಮಾಡಿ, ಅದರಲ್ಲಿ ನಟನ ಪ್ರತಿಯೊಂದು ವೈಶಿಷ್ಟ್ಯವನ್ನು ಸಂಪೂರ್ಣವಾಗಿ ತೋರಿಸಿದ್ದಾರೆ. ಡ್ರೋನ್ ನಲ್ಲಿ ನೋಡಿದರೆ ಬಹಳ ಸುಂದರ ಹಾಗೂ ಬಹಳ ಅದ್ಭುತವಾಗಿ ಈ ಚಿತ್ರ ಕಾಣುತ್ತದೆ. ಎರಡು ದಿನಗಳ ಹಿಂದಷ್ಟೇ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಭಾರಿ ಜನಪ್ರಿಯತೆ ಪಡೆದಿದೆ. ನೆಟ್ಟಿಗರು ಕೂಡ ಮೆಚ್ಚಿ ಕೊಂಡಾಡಿದ್ದಾರೆ.

- Advertisement -

ಅನೇಕ ಚಲನಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದ ಸೂದ್, ರಿಯಲ್ ಲೈಫ್ ನಲ್ಲಿ ಜನರಿಗೆ ಸಹಾಯಗಳನ್ನು ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ವೀಡಿಯೋ ವೀಕ್ಷಿಸಿ….

Join Whatsapp