ಕ್ಲಬ್ ಮೇಲೆ ದಾಳಿ | ಸುರೇಶ್ ರೈನಾ, ಗುರು ರಾಂಧವ ಬಂಧನ

Prasthutha|

ಮುಂಬೈ : ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ 34 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಡ್ರಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು, ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವಾರನ್ನೂ ವಶಕ್ಕೆ ಪಡೆದಿದ್ದಾರೆ. ನಂತರ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ, ಈ ಬಂಧನ ನಡೆದಿದೆ. ಅಂಧೇರಿಯ ಜೆಡಬ್ಲ್ಯೂ ಮ್ಯಾರಿಯೇಟ್ ಹೊಟೆಲ್ ನಲ್ಲಿರುವ ಕ್ಲಬ್ ಮೇಲೆ ಮಂಗಳವಾರ ನಸುಕಿನ ವೇಳೆ 2:30ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಲ್ಲಿ 19 ಮಂದಿ ದೆಹಲಿ, ಪಂಜಾಬ್ ಮೂಲದವರಾಗಿದ್ದು, ಅವರನ್ನು ಬೆಳಗ್ಗೆ ಏಳು ಗಂಟೆಗೆ ದೆಹಲಿಗೆ ವಿಮಾನದ ಮೂಲಕ ಕಳುಹಿಸಲಾಗಿದೆ.

- Advertisement -

ಕೋವಿಡ್ 19 ನಿಯಮಗಳ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯ ನಂತರ ಕ್ಲಬ್ ನಡೆಸುವಂತಿಲ್ಲ. ಆದರೆ, ಅವಧಿ ಮೀರಿ ಕ್ಲಬ್ ನಲ್ಲಿ ಹಲವರು ಉಪಸ್ಥಿತರಿದ್ದರು.

- Advertisement -