ಮುಸ್ಲಿಮ್ ಯುವತಿಯರು ಹಿಂದೂಗಳನ್ನು ಮದುವೆಯಾಗಲಿ: ಮತ್ತೆ ನಾಲಗೆ ಹರಿಯಬಿಟ್ಟ ಸುದರ್ಶನ್ ಟಿವಿಯ ಸಂಪಾದಕ

Prasthutha|

ಭೋಪಾಲ್: ಪ್ರಚೋದನಾಕಾರಿ ಹೇಳಿಕೆಗೆ ಸದಾ ಹೆಸರುವಾಸಿಯಾದ ಸುದರ್ಶನ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ ಮತ್ತೆ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದು, ಮುಸ್ಲಿಮ್ ಯುವತಿಯರು ಹಿಂದೂಗಳನ್ನು ವಿವಾಹವಾಗಲು ಸಿದ್ಧರಾಗಲಿ ಎಂಬ ಹೇಳಿಕೆಯನ್ನು ನೀಡಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಸ್ಲಿಮ್ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ದೊರೆಯುವ ಪ್ರಯೋಜನಗಳನ್ನು ವೀಡಿಯೋದಲ್ಲಿ ತಿಳಿಸುತ್ತಿರುವುದು ಸೆರೆಯಾಗಿದೆ.

ಭವಿಷ್ಯದಲ್ಲಿ ಭಾರತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿದ ಚವ್ಹಾಂಕೆ, ಮುಸ್ಲಿಮ್ ಯುವತಿಯರು ಹಿಂದೂ ಧರ್ಮದ ಸದಸ್ಯರಾಗಬಹುದು ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

Join Whatsapp