ಹೊಸ ಆಯಾಮ ಪಡೆದುಕೊಂಡ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ: ಹಣ, ಚಿನ್ನಕ್ಕಾಗಿ ಕೊಲೆ ನಡೆದಿತ್ತು ಎಂದ ಕುಟುಂಬ

Prasthutha|

►► ‘ಫ್ಲ್ಯಾಟ್ ನಲ್ಲಿ 1 ಕೋಟಿ ರೂಪಾಯಿ, ದೇಹದಲ್ಲಿ 1 ಕೆಜಿಯಷ್ಟು ಚಿನ್ನವಿತ್ತು’

ಬಂಟ್ವಾಳ: ತುಳು ಚಿತ್ರ ನಟ ಮತ್ತು ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಪ್ರಕರಣವು ಹೊಸ ತಿರುವು ಪಡೆದಿದೆ. ಸುರೇಂರರೊಂದಿಗಿದ್ದ ಒಂದು ಕೋಟಿ ರೂಪಾಯಿಯನ್ನು ಕದಿಯುವುದಕ್ಕಾಗಿ ಆತನನ್ನು ಕೊಲ್ಲಲಾಗಿದೆ ಎನ್ನಲಾಗಿದೆ.

- Advertisement -

ಮಂಗಳೂರಿನಲ್ಲಿರುವ ಸುರೇದ್ರರ ತಾಯಿ ರಾಧಾ ಮತ್ತು ಸಹೋದರ ಚಂದ್ರಹಾಸ ಈ ಆರೋಪವನ್ನು ಮಾಡಿದ್ದಾರೆ. ಭಂಡಾರಿಬೆಟ್ಟು ಫ್ಲ್ಯಾಟ್ ನಲ್ಲಿ ಸುರೇಂದ್ರ ಒಂದು ಕೋಟಿ ರೂಪಾಯಿ ಹಣವನ್ನು ಹೊಂದಿದ್ದರು ಮತ್ತು ಅವರ ದೇಹದಲ್ಲಿ ಒಂದು ಕೆಜಿಯಷ್ಟು ಚಿನ್ನಾಭರಣಗಳಿದ್ದವು ಎಂದು ಅವರು ಹೇಳಿದ್ದಾರೆ.

ಎಫ್.ಐ.ಆರ್ ನಲ್ಲಿ ಪೊಲೀಸರು ಇದನ್ನು ಉಲ್ಲೇಖಿಸಿಲ್ಲ. ಹತ್ಯೆಯ ಬಳಿಕ ಆರೋಪಿಗಳು ಆ ನಗದು ಮತ್ತು ಆಭರಣಗಳನ್ನು ಕೊಂಡೊಯ್ದಿದ್ದಾರೆ. ಅವುಗಳ ಮೇಲೆ ಕಣ್ಣಿಟ್ಟು ಅವರನ್ನು ಹತ್ಯೆಗಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ. “ನಾವು ಈ ಕುರಿತು ಪೊಲೀಸರಿಗೆ ಹೇಳಿದ್ದರೂ ಅವರು ದೂರನ್ನು ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ನಾವು ನಗದು ಮತ್ತು ಆಭರಣಗಳ ಕುರಿತು ಎಸ್.ಪಿಗೆ ದೂರು ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.

“ತಮ್ಮ ಮನೆಯಲ್ಲೇ ಬೆಳೆದ ಸತೀಶ್ ಕುಳಾಲ್ ಇತರ ಕೆಲವರೊಂದಿಗೆ ಸೇರಿ ಹತ್ಯೆ ನಡೆಸಿದ್ದಾನೆ. ಈ ಹತ್ಯೆಯ ಹಿಂದೆ ಕುಳಾಲ್ ಮಾತ್ರವಲ್ಲ, ಹಲವರ ಕೈವಾಡವಿದೆ” ಎಂದು ಹೇಳಿದ್ದಾರೆ.

ತನ್ನ ಫ್ಲ್ಯಾಟ್ ನಲ್ಲಿ ನಗದು ಇರುವುದಾಗಿ ಸುರೇಂದ್ರ ಮೂರು ದಿನ ಮುಂಚೆ ತನ್ನ ಬಳಿ ಹೇಳಿರುವುದಾಗಿ ಅವರ ತಾಯಿ ರಾಧಾ ಹೇಳಿದ್ದಾರೆ. ಹಾಗಾಗಿ ತನ್ನ ಪ್ರಕಾರ ಅವನನ್ನು ನಗದು ಮತ್ತು ಆಭರಣಗಳಿಗಾಗಿ ಕೊಲ್ಲಲಾಗಿದೆ  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -