ಸುರತ್ಕಲ್: ಕಾಟಿಪಳ್ಳದಲ್ಲಿರುವ ಅಥೆಂಟಿಕ್ ಓಷಿಯನ್ ಟ್ರೆಷರ್(AOT) ಎಂಬ ಮೀನು ರಫ್ತು ಘಟಕದ ಕಂಪನಿಯಲ್ಲಿ ಇಂದು ಮಧ್ಯಾಹ್ನ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 10 ಕೋಟಿ ರೂ. ಮೌಲ್ಯದ ಸೊತ್ತು ನಷ್ಟವಾಗಿದೆ.
ಕಂಪೆನಿಯ ಕೋಲ್ಡ್ ಸ್ಟೋರ್ ಸೆಕ್ಷನ್ ಮತ್ತು ಕಟ್ಟಿಂಗ್ ಸೆಕ್ಷನ್ ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ಇಂದು ರಜಾದಿನವಾದ ಕಾರಣ ನೌಕರರು ಯಾರು ಇರಲಿಲ್ಲ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯಿಂದ ಸುಮಾರು 10 ಕೋಟಿ ರೂ. ಮೌಲ್ಯದ ಮೀನಿನ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
ಅಥೆಂಟಿಕ್ ಓಷನ್ ಟ್ರೆಷರ್ ಕಂಪೆನಿಯಲ್ಲಿ ಮೀನುಗಳನ್ನು ಸ್ವಚ್ಛಗೊಳಿಸಿ ಮಾಂಸದ ರೂಪಕ್ಕೆ ತಂದು 10 ಕೆ.ಜಿ. ಯ ಪ್ಯಾಕೆಟ್ ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.