ಸುರತ್ಕಲ್: ರಸ್ತೆ ದುರಸ್ತಿಗೆ ಆಗ್ರಹಿಸಿ ಹಾಕಿದ್ದ ಬ್ಯಾನರ್ ಕಳವು

Prasthutha|

- Advertisement -

ಪೊಲೀಸರಿಗೆ ದೂರು ನೀಡಲು SDPI ಚಿಂತನೆ

ಸುರತ್ಕಲ್: ರೈಲ್ವೇ ಮೇಲ್ಸೇತುವೆಯ ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಅಳವಡಿಸಿದ್ದ ಪ್ಲೆಕ್ಸ್‌ನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ ಎಂದು ವರದಿಯಾಗಿದೆ.

- Advertisement -

ಸುರತ್ಕಲ್ ಚೊಕ್ಕಬೆಟ್ಟು ಕ್ರಾಸ್‌ ಬಳಿಯ ರೈಲ್ವೇ ಮೇಲ್ವೇತುವೆ ಮಳೆಗಾಲಕ್ಕೂ ಮುನ್ನವೇ ದುರಸ್ತಿಗೊಂಡಿದೆ. ಇದನ್ನು ದುರಸ್ತಿಗೊಳಿಸುವಂತೆ ಹಲವಾರು ಬಾರಿ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದೆವು. ಆದರೆ, ಯಾವೊಬ್ಬರೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ.

ಈ ಕಾರಣಕ್ಕಾಗಿ ಎಸ್ ಡಿಪಿಐ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ವಾರದೊಳಗೆ ರಸ್ತೆ ದುರಸ್ತಿ ಕಾರ್ಯ ನಡೆಸದಿದ್ದರೆ ಸೆ.4ರಂದು ಸಾರ್ವಜನಿಕರ ಜೊತೆಗೂಡಿಸಿಕೊಂಡು ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಆ.27ರಂದು ಬೆಳಗ್ಗೆ ಪ್ಲೆಕ್ಸ್ ಅಳವಡಿಸಿತ್ತು.

ಈ ಮಧ್ಯೆ ಕಿಡಿಗೇಡಿಗಳು ಅಳವಡಿಸಿದ್ದ ಬ್ಯಾನರ್‌ನ್ನು ಸಂಜೆಯ ವೇಳೆ ಕಳವುಗೈದು ಪರಾರಿಯಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಎಸ್.ಡಿ.ಪಿ.ಐ. ಸುರತ್ಕಲ್ ಬ್ಲಾಕ್ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp