ಸುರತ್ಕಲ್: SDAU ವತಿಯಿಂದ ಫೆ.21ರಂದು ಉಚಿತ ವೈದ್ಯಕೀಯ ಶಿಬಿರ, ಕ್ರೀಡಾಕೂಟ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ (SDAU) ಸುರತ್ಕಲ್ ಘಟಕದ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಫೆ. 21ರ ಮಂಗಳವಾರದಂದು ಉಚಿತ ವೈದ್ಯಕೀಯ ಶಿಬಿರ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆಯೆಂದು ಆಯೋಜಕರು ತಿಳಿಸಿದ್ದಾರೆ.

- Advertisement -

ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಶ್ರೀನಿವಾಸ ಮುಕ್ಕ ಆಸ್ಫತ್ರೆಯ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಡಾ|ಶೀತಲ್ (ಎಲುಬು ತಜ್ಞರು), ಡಾ|ದೀಪಿಕಾ (ಕಿವಿ,ಮೂಗು ತಜ್ಞರು), ಡಾ|ವೀರೇಂದ್ರ (ಜನರಲ್ ತಪಾಸಣೆ), ಡಾ|ವಿಗ್ನೇಶ್ (ಕಣ್ಣಿನ ತಜ್ಞರು) ರವರ ತಂಡದಿಂದ ಇ.ಸಿ.ಜಿ,ಬಿಪಿ,ಶುಗರ್, ಸೇರಿದಂತೆ ಎಲ್ಲಾ ರೀತಿಯ ತಪಾಸಣೆ ನಡೆಯಲಿದೆ.

- Advertisement -

ಬೆಳಿಗ್ಗೆ 10 ಗಂಟೆಯಿಂದ ಕೃಷ್ಣಾಪುರದ ಪ್ಯಾರಡೈಸ್ ಮೈದಾನದಲ್ಲಿ ಆಟೋ ಚಾಲಕರ ಕ್ರೀಡಾಕೂಟ ನಡೆಯಲಿದೆ. ಸಂಜೆ 6 ಗಂಟೆಯ ನಂತರ ಸಭಾ ಕಾರ್ಯಕ್ರಮ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಗುವುದು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಸುರತ್ಕಲ್ ಘಟಕದ ಅಧ್ಯಕ್ಷ ಇಬ್ರಾಹಿಂ ಚೊಕ್ಕಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp