ಸುರತ್ಕಲ್ ಜಲೀಲ್ ಹತ್ಯೆ; ನಿಷ್ಪಕ್ಷಪಾತ ತನಿಖೆಯಾಗಲಿ: ಮುಸ್ಲಿಂ ಐಕ್ಯತಾ ವೇದಿಕೆ

Prasthutha|

ಮಂಗಳೂರು: ನಗರದ ಹೊರವಲಯದ ಕಾಟಿಪಳ್ಳ ದಲ್ಲಿ ನಡೆದ ಜಲೀಲ್ ಎಂಬವರ ಕೊಲೆಯನ್ನು ಖಂಡಿಸಿರುವ ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ವಲಯ, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದೆ.

- Advertisement -


 ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿರುವ ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಇದರ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಕಾಟಿಪಳ್ಳ ನಾಲ್ಕನೇ ಬ್ಲಾಕಿನ ಲತೀಫಾ ಸ್ಟೋರ್ ಮಾಲಕ ಅಬ್ದುಲ್ ಜಲೀಲ್ ಅವರ ಎಂಬವರನ್ನು ತನ್ನ ಅಂಗಡಿಯ ಮುಂದೆ ದುಷ್ಕರ್ಮಿಗಳು ಚೂರಿ ಇರಿದು ಹತ್ಯೆ ನಡೆಸಲಾಗಿದ್ದು, ಈ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಪೊಲೀಸ್ ಇಲಾಖೆ ಬಯಲಿಗೆಳೆದು ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.


ಜಿಲ್ಲೆಯಲ್ಲಿ ಪದೇ ಪದೇ ಶಾಂತಿ ಕದಡುವ ಕೆಲಸ ಆಗುತ್ತಿದ್ದು, ಪೋಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಮುಸ್ಲಿಂ ಐಕ್ಯತಾ ವೇದಿಕೆ ಆರೋಪಿಸಿದೆ.



Join Whatsapp