ಮಂಗಳೂರು: ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಪ್ರಕರಣದ ಆರೋಪಿಗಳಾದ ಕುಲಾಯಿಯ ಗಿರಿಧರ್, ಕೈಕಂಬದ ದೀಕ್ಷಿತ್’ಗೆ ಜಾಮೀನು ಮಂಜೂರಾಗಿದೆ.
ಕಳೆದ ವರ್ಷ ಜುಲೈ 28 ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ಸಂಘಪರಿವಾರದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.