ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: RSS ಸಹ ಸಂಘಟನೆ ಬಜರಂಗದಳದ ಕಾರ್ಯರ್ತರ ಬಂಧನ

Prasthutha|

ಮಂಗಳೂರು: ಹೊರವಲಯದ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ಆರ್ ಎಸ್ ಎಸ್  ಸಹ ಸಂಘಟನೆ ಬಜರಂಗದಳದ ಕಾರ್ಯರ್ತರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿ ಶೀಟರ್ ಶ್ರೀನಿವಾಸ್ ಯಾನೆ ಶೀನು , ಕಟೀಲು ಕಲ್ವಾರ್ ನಿವಾಸಿ ರೌಡಿಶೀಟರ್ ಸುಹಾಸ್ ಶೆಟ್ಟಿ , ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿಶೀಟರ್ ಅಭಿ ಯಾನೆ ಅಭಿಷೇಕ್ , ಸುರತ್ಕಲ್ ಕುಲಾಯಿ ನಿವಾಸಿ ಮೋಹನ್, ಗಿರಿ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಟೀಲು ಕಲ್ವಾರು ನಿವಾಸಿಯಾಗಿರುವ ರೌಡಿಶೀಟರ್ ಸುಹಾಸ್ ಶೆಟ್ಟಿ ಮೇಲೆ  ಮುಸ್ಲಿಂ ಯುವಕನ ಕೊಲೆ , ಕೊಲೆ ಯತ್ನ ಕೇಸ್ ಇದೆ. ಈತ ಆರ್ ಎಸ್ ಎಸ್  ಸಹ ಸಂಘಟನೆ ಬಜರಂಗದಳದ ಕಾರ್ಯಕರ್ತನಾಗಿದ್ದು, ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ.

- Advertisement -

ಅಭಿ ಯಾನೆ ಅಭಿಷೇಕ್ ಸುರತ್ಕಲ್ ಕೃಷ್ಣಾಪುರ ನಿವಾಸಿ. ನಿರುದ್ಯೋಗಿಯಾಗಿದ್ದ ಈತನ ವಿರುದ್ಧ ಮುಸ್ಲಿಂ ಯುವಕನ ಕೊಲೆ ಯತ್ನದ ಕೇಸ್ ಇದೆ.  ಇವನು ಕೂಡ ಆರ್ ಎಸ್ ಎಸ್  ಸಹ ಸಂಘಟನೆ ಬಜರಂಗದಳದ ಕಾರ್ಯಕರ್ತ.

ಸುರತ್ಕಲ್ ಕುಲಾಯಿ ನಿವಾಸಿ ಮೋಹನ್ . ಮೂಲತಃ ನೇಪಾಳಿ. ಕುಟುಂಬ ಸಮೇತ ಸುರತ್ಕಲ್ ಗೆ ಬಂದು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆರ್ ಎಸ್ ಎಸ್  ಸಹ ಸಂಘಟನೆ ಬಜರಂಗದಳದ ಸದಸ್ಯರ ಜೊತೆ ಗುರುತಿಸಿಕೊಂಡಿದ್ದ.

ರೌಡಿ ಶೀಟರ್ ಶ್ರೀನಿವಾಸ್ ಯಾನೆ ಶೀನು ಫಾಜಿಲ್ ಕೊಲೆ ಮಾಡುವ ತಂಡದ ಕಾರಿನಲ್ಲಿ ಚಾಲಕನಾಗಿದ್ದ. ಈತನ ಮೇಲೆ ಮುಸ್ಲಿಂ ಯುವಕನ ಕೊಲೆ ಯತ್ನ ಕೇಸ್ ಇದೆ. ನಿರುದ್ಯೋಗಿಯಾಗಿದ್ದ ಈತನೂ ಕೂಡ ಆರ್ ಎಸ್ ಎಸ್  ಸಹ ಸಂಘಟನೆ ಬಜರಂಗದಳದ ಕಾರ್ಯಕರ್ತ ಎಂದು ತಿಳಿದು ಬಂದಿದೆ.

ಪ್ರಕರಣದ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಕಾರನ್ನು ದುಷ್ಕರ್ಮಿಗಳಿಗೆ ನೀಡಿದ್ದ ಅಜಿತ್ ಕ್ರಾಸ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಉಡುಪಿಯಲ್ಲಿ ಹತ್ಯೆಗೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಇಂದು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.



Join Whatsapp