ಸುರತ್ಕಲ್ ಪ್ರಕರಣ | ಪೊಲೀಸರು ಲಾಠಿ ಬಿಟ್ರೆ ಜನರು ಲಾಠಿ ಹಿಡಿದು ತಿರುಗುವ ಪರಿಸ್ಥಿತಿ ನಿರ್ಮಾಣ ಆಗುತ್ತೆ: ಯು.ಟಿ ಖಾದರ್ ವಾಗ್ದಾಳಿ

Prasthutha|

ಮಂಗಳೂರು: ಸುರತ್ಕಲ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ್ರೋಹಿ ಶಕ್ತಿಗಳು, ರೌಡಿಗಳ ಅಟ್ಟಹಾಸ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಾನೂನಿನ‌ ಭಯವಿಲ್ಲದೇ ರೌಡಿಗಳು ಅಟ್ಟಹಾಸ ತೋರಿಸುತ್ತಿದ್ದು, ಆಡಳಿತ ಪಕ್ಷದ ಒತ್ತಡದಿಂದ ಪೊಲೀಸ್ ಇಲಾಖೆ‌ ನಿಸ್ಸಾಹಕವಾಗಿದೆ ಎಂದು ಹೇಳಿದರು.

ಪೊಲೀಸರು ರಾಜಕೀಯ ಬಾಸ್ ಗಳ ಮಾತುಗಳಿಗೆ ಗೌರವ ಕೊಡಬಾರದು. ಕಾನೂನುಗಳಿಗೆ ಪೊಲೀಸರು ಗೌರವ ಕೊಡಬೇಕು. ಯಾರ್ಯಾರ ಮಕ್ಕಳಿಗೆ ಸಂಬಂಧ ಇಲ್ಲದವರು ಹೊಡೆಯುತ್ತಿದ್ದಾರೆ. ಈ ರೀತಿ ಆದರೆ ಅರಾಜಕತೆ ಸೃಷ್ಟಿಯಾಗುತ್ತದೆ.

- Advertisement -

ಅಲ್ಲದೆ, ಪೊಲೀಸ್ ಇಲಾಖೆಯ ಮುಂದೆಯೇ ಹೊಡಿಯುತ್ತಾರೆ. ಪೊಲೀಸರು ಹೊಡಿಬೇಡಿ‌ ಎಂದು ಅಂಗಲಾಚುವ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಇಲಾಖೆಯ‌ ಲಾಠಿ ಎಲ್ಲಿ ಹೋಯಿತು. ಪೊಲೀಸರು ಲಾಠಿ ಬಿಟ್ರೆ ಜನರು ಲಾಠಿ ಹಿಡಿದು ತಿರುಗುವ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಪೊಲೀಸ್ ಇಲಾಖೆ ದಾಳಿ ಮಾಡಿದವರ ಮೇಲೆ ಯಾವ ಕೇಸ್ ಹಾಕಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಯಾರ ಒತ್ತಡ ಇತ್ತು,  ಉದ್ಯೋಗಕ್ಕಾಗಿ ಯಾಕೆ ಯುವಕ ಯುವತಿಯರು ಮಂಗಳೂರಿಗೆ ಬರ್ತಿಲ್ಲ ಒಬ್ಬ ರೌಡಿ ರೋಡಲ್ಲಿ ಹೊಡಿತ್ತಾರೆ ಅಂದರೆ ಯಾರಾದರೂ  ಕಳುಹಿಸುತ್ತಾರಾ. ಪೊಲೀಸರು ಆತ್ಮವಿಶ್ವಾಸ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು.

ಆದರೆ, ಆರೋಪಿಗಳು ಬೆಳಗ್ಗೆ ಹೋಗಿ ಸಂಜೆ ಜಾಮೀನಿನ‌ ಮೇಲೆ ಹೊರಗೆ ಬರ್ತಾರೆ. ನಾನು ಸಚಿವನಾಗಿದ್ದಾಗ ಇಂತಹುದುಕ್ಕೆ ಅವಕಾಶ ಕೊಟ್ಟಿಲ್ಲ. ರೌಡಿಗಳಿಗೆ ಈ ಹಿಂದೆ ಭಯವಿತ್ತು. ಪೊಲೀಸ್ ಇಲಾಖೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ಕೊಡುತ್ತೆ. ರೌಡಿಗಳಿಗೆ, ಸಮಾಜದ್ರೋಹಿ ಶಕ್ತಿಗಳಿಗೆ ತಕ್ಕ ಶಾಸ್ತ್ರಿ ಮಾಡಬೇಕು ಎಂದು ತಿಳಿಸಿದರು.



Join Whatsapp