ಸೂರತ್ ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡ: 7 ಸುಟ್ಟ ಶವಗಳು ಪತ್ತೆ

Prasthutha|

ಗಾಂಧಿನಗರ: ಬುಧವಾರ ಸೂರತ್ ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 24 ಕಾರ್ಮಿಕರು ಗಾಯಗೊಂಡಿದ್ದು, ಒಂದು ದಿನದ ನಂತರ ರಾಸಾಯನಿಕ ಸ್ಥಾವರದ ಆವರಣದಲ್ಲಿ ಕನಿಷ್ಠ ಏಳು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.

- Advertisement -

ಸಚಿನ್ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಈಥರ್ ಇಂಡಸ್ಟ್ರೀಸ್ ನಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸೈಟ್ನಲ್ಲಿ ಸುಮಾರು ಏಳು ವ್ಯಕ್ತಿಗಳ ಅಸ್ಥಿಪಂಜರಗಳು ಮತ್ತು ಇತರ ಅವಶೇಷಗಳು ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು.



Join Whatsapp