ಚೈತ್ರಾ ಪ್ರಕರಣ: ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುರೈಯ್ಯ ಅಂಜುಮ್

Prasthutha|

ಮಂಗಳೂರು: ಬಿಜೆಪಿ ಟಿಕೆಟ್ ನೀಡುವುದಾಗಿ ಬಹುಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಚೈತ್ರಾ ಕುಂದಾಪುರ ಅವರಿಗೆ ಆಶ್ರಯ ನೀಡಿರುವ ಆರೋಪದ ಬಗ್ಗೆ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಕಾಂಗ್ರೆಸ್ ವಕ್ತಾರೆ ಸುರೈಯ್ಯಾ ಅಂಜುಮ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

- Advertisement -


ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿರುವ ಅವರು, ಚೈತ್ರ 7 ದಿನಗಳಿಂದ ನನ್ನ ಮನೆಯಲ್ಲಿ ಅವಿತು ಕುಳಿತಿದ್ದಳು ಎಂದು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಹಾಕುತ್ತಿದ್ದರು. ಈ ವಿಚಾರ ಸುಳ್ಳು ಸಿಸಿಬಿ ಇಂದ ಯಾವುದೇ ನೋಟಿಸ್ ನೀಡಿಲ್ಲ ಎಂದು ಹೇಳಿದರು ಕೇಳದೆ ಪದೇ ಪದೇ ಬ್ರೇಕಿಂಗ್ ಹಾಕುತ್ತಿದ್ದ ಎಲ್ಲಾ ಮಾಧ್ಯಮಗಳ ಮೇಲೂ ಮಾನನಷ್ಟ ಮುಕದ್ದಮೆ ಹಾಕಿದ್ದೇನೆ.
ನ್ಯಾಯದೇವತೆಯ ಮೇಲೆ ಸಂಪೂರ್ಣ ಭರವಸೆ ಇದೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವೈಯುಕ್ತಿಕ ವರ್ಚಸ್ಸಿಗೆ ಧಕ್ಕೆ ಆಗುವಂತೆ ಸುಳ್ಳು ಸುದ್ದಿ ಪ್ರಕಟಿಸಿದ ಜಯಶೇಖರ್ ಮಡಪ್ಪಾಡಿ ಹಾಗೂ ಪಬ್ಲಿಕ್ ನೆಸ್ಟ್ ಎಂಬ ಯ್ಯೂಟುಬ್ ಚಾನೆಲ್ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಿಂದಿಸಿದವರ ಮೇಲೂ ಕ್ರಮ ತೆಗೆದುಕೊಂಡಿದ್ದೇನೆ ಎಂದು ಬರೆದು ಕೊಂಡಿದ್ದಾರೆ.

Join Whatsapp