ಕೇಂದ್ರೀಯ ವಿದ್ಯಾಲಯದ ಒಂದನೇ ತರಗತಿ ಪ್ರವೇಶ: 6 ವರ್ಷ ನಿಯಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಕೇಂದ್ರ ಸರಕಾರವು 2020ರ ಜುಲೈ 9ರಂದು ಜಾರಿಗೆ ತಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಪ್ರಕಾರ ಕೇಂದ್ರೀಯ ವಿದ್ಯಾಲಯ ಶಾಲೆಯ 1ನೇ ತರಗತಿಗೆ ಪ್ರವೇಶ ಪಡೆಯುವ ಮಗುವಿನ ವಯಸ್ಸು 5 ವರ್ಷ ದಾಟಿ 6ರ ಸಮೀಪ ಇರಬೇಕು ಎಂಬುದನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

- Advertisement -


ಕೆವಿಎಸ್- ಕೇಂದ್ರೀಯ ವಿದ್ಯಾಲಯ ಸಂಘಟನೆ 2022- 23ಕ್ಕೆ ಮಕ್ಕಳು 1ನೇ ತರಗತಿಗೆ ಸೇರುವ ವಯಸ್ಸನ್ನು 5 ದಾಟಿ 6 ಎಂದು ಮಾಡಿರುವುದನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್, ಕೇಂದ್ರೀಯ ವಿದ್ಯಾಲಯದ ನಿಯಮ ಸಮರ್ಪಕವಾಗಿದೆ ಎಂದು ಹೇಳಿತು.


ಕೆಲವು ಹೆತ್ತವರು ಈ ಸಂಬಂಧ ದಿಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಜಸ್ಟಿಸ್ ಎಸ್. ಕೆ. ಕೌಲ್ ನೇತೃತ್ವದ ನ್ಯಾಯ ಪೀಠವು ಈ ಅರ್ಜಿಗಳನ್ನು ವಜಾ ಮಾಡಿತು. ಏಪ್ರಿಲ್ 11ರಂದು ಹೈಕೋರ್ಟಿನ ಏಕ ಸದಸ್ಯ ನ್ಯಾಯ ಪೀಠವು 6 ವರುಷದ ನಿಯಮ ಎತ್ತಿ ಹಿಡಿದು ತೀರ್ಪು ನೀಡಿತ್ತು.

- Advertisement -


ನಮ್ಮ ತೀರ್ಮಾನವು ಎನ್ ಇಪಿ- ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಆದರಿಸಿ ನಿಂತಿದೆ ಎಂದು ಕೆವಿಎಸ್ ಕೋರ್ಟಿನಲ್ಲಿ ವಿವರಣೆ ನೀಡಿತು. “ಸಂಶಯವಿಲ್ಲ, ಈ ನಿಯಮ 2020ರಲ್ಲಿ ಆಗಿದೆ. ದಿಲ್ಲಿಯಲ್ಲಿ ಇನ್ನಷ್ಟೆ ಜಾರಿಗೆ ಬರಬೇಕಾಗಿದೆ. ಈಗಾಗಲೇ 21 ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. 2009ರ ಆರ್ ಟಿಇ ಕಾಯ್ದೆಯು ಕೆವಿಎಸ್ ಗಳನ್ನು ಬೇರೆಯೇ ಇಟ್ಟಿದೆ. ದೇಶದ ಎಲ್ಲ ಕೇಂದ್ರೀಯ ವಿದ್ಯಾಲಯಗಳು ಒಂದೇ ನಿರ್ವಹಣಾ ಕೇಂದ್ರದಿಂದ ನಡೆಸುವ ಒಂದೇ ದೇಶೀಯ ನೀತಿ ಹೊಂದಿರುವುದಾಗಿದೆ. ಹಾಗಿರುವಾಗ ಈಗಾಗಲೇ ಇರುವ ನಿಯಮದಂತೆ 6 ವರುಷದ ನಿಯಮ ಸರಿಯಿದೆ” ಒಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.
ಇದರ ವಿರುದ್ಧ ಏಪ್ರಿಲ್ 13ರಂದು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.


ವಿಶೇಷ ರಜಾ ಅರ್ಜಿಗಳನ್ನು ಇದರ ವಿರುದ್ಧ ಸಲ್ಲಿಸಿದ್ದನ್ನು ಜಸ್ಟಿಸ್ ಗಳಾದ ಕೌಲ್ ಮತ್ತು ಎಂ. ಎಂ. ಸುಂದರೇಶ್ ಅವರಿದ್ದ ಪೀಠವು ಪ್ರಶ್ನಿಸಿತು. “ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅಲ್ಲೂ ಈ ಅರ್ಜಿ ನಿಲ್ಲಲಾಗಲಿಲ್ಲ. ಹೈ ಕೋರ್ಟ್ ಅದನ್ನು ಈಗಾಗಲೇ ವಜಾ ಮಾಡಿದೆ. ಸರಿಯಾಗಿದೆ ತಾನೆ?” ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು. “ವಿಶೇಷ ರಜಾ ಅರ್ಜಿಯು ಕೆಳ ಕೋರ್ಟಿನಲ್ಲಿ ನಿರಾಕರಣೆ ಗೊಂಡಿದೆ. ಅದನ್ನೇ ಈ ಕೋರ್ಟ್ ಕೂಡ ಎತ್ತಿ ಹಿಡಿಯುತ್ತದೆ, ಅರ್ಜಿ ವಜಾ ಮಾಡುತ್ತದೆ” ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿತು.



Join Whatsapp