ಅಗ್ನಿಪಥ ಯೋಜನೆ ಪ್ರಶ್ನಿಸಿದ ಅರ್ಜಿಗಳನ್ನು ದಿಲ್ಲಿ ಹೈಕೋರ್ಟಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟು

Prasthutha|

ನವದೆಹಲಿ: ಸರ್ವೋಚ್ಚ ನ್ಯಾಯಾಲಯವು ಅಗ್ನಿಪಥವನ್ನು ಪ್ರಶ್ನಿಸಿದ ಎಲ್ಲ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿ ಮೊದಲು ಅಲ್ಲಿ ತೀರ್ಮಾನವಾಗಲಿ ಎಂದು ಮಂಗಳವಾರ ನಿರ್ದೇಶನ ನೀಡಿದೆ.

- Advertisement -

ಅರ್ಜಿದಾರರು ದಿಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಬಾಕಿ ಇರುವ ಅರ್ಜಿದಾರರಿಗೆ ತಿಳಿಸಿತು.

ಒಕ್ಕೂಟ ಸರಕಾರದ ಅಗ್ನಿಪಥ ಯೋಜನೆಯನ್ನು ಪ್ರಶ್ನಿಸಿ ಹಲವು ಹೈಕೋರ್ಟ್ ಗಳಲ್ಲಿಯೂ ಅರ್ಜಿಗಳು ಇದ್ದು ಅವನ್ನೂ ದಿಲ್ಲಿ ಕೋರ್ಟಿಗೆ ವರ್ಗಾಯಿಸಿತು.

- Advertisement -

ಹೈಕೋರ್ಟುಗಳು ಈ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿವೆ, ದಿಲ್ಲಿ ಕೋರ್ಟು ಒಂದು ಕಡೆ ತೀರ್ಮಾನ ಬರಲಿ ಎಂದು ಜಸ್ಟಿಸ್ ಗಳಾದ ಡಿ. ವೈ. ಚಂದ್ರಚೂಡ್, ಎ. ಎಸ್. ಬೋಪಣ್ಣ, ಸೈರ್ಯಕಾಂತ್ ಅವರುಗಳಿದ್ದ ಸುಪ್ರೀಂ ಕೋರ್ಟ್ ಪೀಠವು ಹೇಳಿತು.

“ಇಲ್ಲಿ ಮೂರು ಅರ್ಜಿಗಳು ಬಂದಿವೆ. ಅವನ್ನು ದಿಲ್ಲಿ ಹೈಕೋರ್ಟಿಗೆ 226ನೇ ವಿಧಿಯಂತೆ ವರ್ಗಾಯಿಸಲಾಗಿದೆ. ಇತರ ಹೈಕೋರ್ಟುಗಳು ಪ್ರಕರಣ ಬಾಕಿ ಇಟ್ಟುಕೊಳ್ಳಲಿ ಇಲ್ಲವೇ ದಿಲ್ಲಿ ಉಚ್ಚ ನ್ಯಾಯಾಲಯಕ್ಕೇ ವರ್ಗಾಯಿಸಲಿ ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿತು.

ಅಗ್ನಿಪಥ ಯೋಜನೆಯ ಸಂವಿಧಾನ ಬದ್ಧತೆಯನ್ನು ಈ ಅರ್ಜಿಗಳ ಮೂಲಕ ಪ್ರಶ್ನಿಸಲಾಗಿದೆ. ವಕೀಲ ಎಂ. ಎಲ್. ಶರ್ಮಾ ಸಲ್ಲಿಸಿದ ಅರ್ಜಿಯಲ್ಲಿ 2022ರ ಜೂನ್ 14ರ ಕೇಂದ್ರ ಸರಕಾರದ ತಾತ್ಕಾಲಿಕ ಸೇನಾ ನೇಮಕಾತಿಯ ಈ ಯೋಜನೆಯನ್ನು ಕಿತ್ತು ಹಾಕುವಂತೆ ಕೇಳಿಕೊಂಡಿದ್ದರು.



Join Whatsapp