PFI ನಾಯಕ ಇ.ಅಬೂಬಕರ್ ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ

Prasthutha|

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ ಎಫ್ ಐ) ಮಾಜಿ ಅಧ್ಯಕ್ಷ ಇ.ಅಬೂಬಕರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ‌.

- Advertisement -

ಈ ಹಿನ್ನೆಲೆ ಎರಡು ದಿನಗಳಲ್ಲಿ ಅವರನ್ನು ದಿಲ್ಲಿಯ ಏಮ್ಸ್ ಗೆ ಸ್ಥಳಾಂತರಿಸುವಂತೆ ಸೂಚಿಸಿದೆ.

ತೀವ್ರಾ ಅನಾರೋಗ್ಯ ಪೀಡಿತರಾಗಿರುವ ಅವರು ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಇ.ಅಬೂಬಕರ್ ಅವರು ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅವರನ್ನು ಎರಡು ದಿನಗಳಲ್ಲಿ ದಿಲ್ಲಿಯ ಏಮ್ಸ್ ಗೆ ಸ್ಥಳಾಂತರಿಸುವಂತೆ ಸೂಚಿಸಿದೆ.

- Advertisement -

ಅಲ್ಲದೆ ಚಿಕಿತ್ಸೆಯ ವೇಳೆ ಅವರ ಜೊತೆ ಇರಲು ಪುತ್ರನಿಗೆ ಅನುಮತಿ ನೀಡಿದೆ.

ಇದಲ್ಲದೆ ಇ.ಅಬೂಬಕರ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಪರೀಕ್ಷಿಸಿ ನಾಲ್ಕು ದಿನಗಳಲ್ಲಿ ವರದಿ ಸಲ್ಲಿಸುವಂತೆ ಏಮ್ಸ್‌ ನ ತಜ್ಞ ವೈದ್ಯರ ತಂಡಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.



Join Whatsapp