ಸುಳ್ಳು ಸುದ್ದಿ ಪತ್ತೆ ಹಚ್ಚುವ ಪ್ರಕ್ರಿಯೆ | ಟ್ವಿಟರ್, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Prasthutha|

ನವದೆಹಲಿ : ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಸಂದೇಶ, ದೇಶದ್ರೋಹಿ, ಪ್ರಚೋದನಕಾರಿ ಅಂಶಗಳನ್ನು ಪತ್ತೆ ಹಚ್ಚಲು ಪ್ರಕ್ರಿಯೆ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಮತ್ತು ಟ್ವಿಟರ್ ಗೆ ನೋಟಿಸ್ ಜಾರಿಗೊಳಿಸಿದೆ.

- Advertisement -

ಕಳೆದ ವರ್ಷ ಮೇನಲ್ಲಿ ಬಿಜೆಪಿ ನಾಯಕ ವಿನೀತ್ ಗೋಯೆಂಕ ಈ ಕುರಿತು ಅರ್ಜಿ ಸಲ್ಲಿಸಿದ್ದರು. ನಕಲಿ ಖಾತೆಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಹರಡುವ, ಪ್ರಚೋದನಕಾರಿ ಅಂಶಗಳು ಮತ್ತು ಜಾಹೀರಾತು ಪರಿಶೀಲಿಸಲು ಇರುವ ಪ್ರಕ್ರಿಯೆಯ ಕುರಿತು ಅರ್ಜಿಯಲ್ಲಿ ಅವರು ಕೋರಿದ್ದರು.

ಪ್ರಖ್ಯಾತ ವ್ಯಕ್ತಿಗಳು, ಜನರ ಹೆಸರಲ್ಲಿ ನೂರಾರು ನಕಲಿ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಗಳಿವೆ. ಇವುಗಳ ಬಗ್ಗೆ ಕ್ರಮ ಕೈಗೊಳ್ಳಲು ತಾನು ಕೋರಿದ್ದೇನೆ, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರು ಆಪಾದಿಸಿದ್ದರು.

- Advertisement -

ಪ್ರತಿಸ್ಪರ್ಧಿಗಳ ತೇಜೋವಧೆ ಮಾಡಲು ರಾಜಕೀಯ ಪಕ್ಷಗಳು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಖಾತೆಗಳನ್ನು ಬಳಸುತ್ತಿವೆ ಎಂದು ಅವರು ಆಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವಿರೋಧಿಗಳನ್ನು ಸುಳ್ಳು ಸುದ್ದಿ ಮತ್ತು ಅಪಪ್ರಚಾರಗಳ ಮೂಲಕವೇ ಸೋಲಿಸಿದ್ದ ಬಿಜೆಪಿಗೆ, ಈಗ ಅದೇ ತಿರುಗುಬಾಣವಾಗಿದೆ. ತಮ್ಮ ಆಡಳಿತದ ವೈಫಲ್ಯವನ್ನು ಜನರು ಅದೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸುತ್ತಿರುವುದು ನುಂಗಲಾರದ ತುತ್ತಾಗಿದೆ.   

Join Whatsapp