ದೆಹಲಿ: ರಾಜೀವ್ ಗಾಂಧಿ ಹತ್ಯೆ ಅಪರಾಧಿ ಪೆರಾರಿವಾಲನ್’ಗೆ 32 ವರ್ಷಗಳ ಬಳಿಕ ಸುಪ್ರೀಮ್ ಕೋರ್ಟ್ ಜಾಮೀನು

Prasthutha|

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೊಳಗಾದ ಎಜಿ ಪೆರಾರಿವಾಲನ್’ಗೆ 32 ವರ್ಷಗಳ ಬಳಿಕ ಸುಪ್ರೀಮ್ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.

- Advertisement -

1991 ರಿಂದ ಜೈಲಿನಲ್ಲಿರುವ ಎಜಿ ಪೆರಾರಿವಾಲನ್’ಗೆ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ತನ್ನ ಜೀವನದ 32 ವರ್ಷಗಳನ್ನು ಜೈಲಿನಲ್ಲಿ ಕಳೆದಿರುವುದನ್ನು ಪರಿಗಣಿಸಿ ಕೇಂದ್ರ ವಿರೋಧದ ನಡುವೆಯೂ ಪೆರಾರಿವಾಲನ್’ಗೆ ಜಾಮೀನು ಮಂಜೂರು ಮಾಡಿರುವುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

- Advertisement -

ವಿಶೇಷ ರಜೆಯನ್ನು ಮಂಜೂರು ಮಾಡುವಂತೆ ಕೋರಿ 2016 ರಲ್ಲಿ ಪೆರಾರಿವಾಲನ್ ಸಲ್ಲಿಸಿದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.



Join Whatsapp