ಪಶುವೈದ್ಯೆ ಅತ್ಯಾಚಾರ ಪ್ರಕರಣ: ಹೈದರಾಬಾದ್ ಎನ್ಕೌಂಟರ್ ಉದ್ದೇಶಪೂರ್ವಕ ಎಂದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: 2019ರಲ್ಲಿ ನಡೆದ ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ  ಆರೋಪಿಗಳ ಎನ್ಕೌಂಟರ್ ಉದ್ದೇಶಪೂರ್ವಕವಾಗಿ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ಹೇಳಿದೆ.

- Advertisement -

ಆರೋಪಿಗಳಲ್ಲಿ ನಾಲ್ವರಲ್ಲಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದರು. ಈ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಲೋಪಗಳಿವೆ ಎಂದು ತೋರಿಸಿರುವ ಆಯೋಗ, 10 ಮಂದಿ ಪೊಲೀಸರನ್ನು ಕೊಲೆ ಆರೋಪದಲ್ಲಿ  ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿ ಈ ಕುರಿತು ಸುಪ್ರೀಂಕೋರ್ಟ್ ಗೆ ವರದಿ ನೀಡಿದ್ದು, ಈ ಎನ್ಕೌಂಟರ್ ಪೊಲೀಸರ ಸೃಷ್ಟಿ ಎಂದು ತಿಳಿಸಿದೆ.  “ಅವರನ್ನು ಸಾಯಿಸುವ ಬಯಕೆಯಿಂದಲೇ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿತ್ತು” ಎಂದು ವರದಿ ಉಲ್ಲೇಖಿಸಿದೆ. ಈ ವರದಿ ಸಲ್ಲಿಕೆಯ ಬಳಿಕ ಅದರ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುವಂತೆ ತೆಲಂಗಾಣ ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

- Advertisement -

ಪಶುವೈದ್ಯೆಯ ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರನ್ನು ಕೆಲವರು ಸಂಭ್ರಮಿಸಿದ್ದರು. ಕೆಲವರು ನ್ಯಾಯಾಲಯ ಶಿಕ್ಷೆ ವಿಧಿಸುವ ಮೊದಲು ಪೊಲೀಸರ ಎನ್ ಕೌಂಟರ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನೈಜ ಆರೋಪಿಗಳ ರಕ್ಷಣೆಗೆ ಎನ್ ಕೌಂಟರ್ ನಡೆದಿದೆ ಎಂಬ ಟೀಕೆ ಕೂಡ ವ್ಯಕ್ತವಾಗಿತ್ತು.

Join Whatsapp