ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಸುಪ್ರೀಮ್ ಕೋರ್ಟ್ ಆದೇಶ

Prasthutha|

►ಕೇಂದ್ರದ ಮಲತಾಯಿ ಧೋರಣೆಗೆ ಸುಪ್ರೀಮ್ ‘ಚಾಟಿ’ !

- Advertisement -

ದೆಹಲಿ : ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕರ್ನಾಟಕಕ್ಕೆ  ಈಗ ಒದಗಿಸಲಾಗುತ್ತಿರುವ 965 ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ರಮಾಣವನ್ನು 1200 ಮೆಟ್ರಿಕ್ ಟನ್ ಗೆ ಏರಿಸಿ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಪ್ರೀಮ್ ಕೋರ್ಟ್ ಮೊರೆ ಹೋಗಿತ್ತು. ಜಸ್ಟಿಸ್ ಎಂ ಆರ್ ಶಾ ನೇತೃತ್ವದ ಸುಪ್ರೀಮ್ ಕೋರ್ಟಿನ ಪೀಠ ಈ ಕುರಿತು ಇಂದು ತೀರ್ಪು ನೀಡಿದ್ದು, ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಆ ಮೂಲಕ ಕೇಂದ್ರ ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಸುಪ್ರೀಮ್ ಕೋರ್ಟ್ ಸರಿಯಾದ ಚಾಟಿ ಬೀಸಿದೆ. ಕರ್ನಾಟಕಕ್ಕೆ  1200 ಮೆಟ್ರಿಕ್ ತ ಟನ್ ಆಕ್ಸಿಜನ್ ಪೂರೈಸುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ.



Join Whatsapp