ನವದೆಹಲಿ : ಸುಪ್ರೀಂ ಕೋರ್ಟ್ ಶನಿವಾರ ನ್ಯಾಯ ಪೀಠಕ್ಕೆ ಎರಡು ನ್ಯಾಯಾಧೀಶರ ನೇಮಕಾತಿ ಮಾಡಿದ್ದು ಆ ಮೂಲಕ 34 ನ್ಯಾಯಾಧೀಶರ ಪೂರ್ಣ ಬಲವನ್ನು ಮರಳಿ ಪಡೆಯಲು ಸಜ್ಜಾಗಿದೆ.
ಸಿಜೆಐ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಗುಜರಾತ್ ಹೈಕೋರ್ಟ್ ನ ನ್ಯಾಯಮೂರ್ತಿ ಜಮ್ಶೆಡ್ ಬಿ ಪರ್ಡಿವಾಲಾ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಗೆ ಬಡ್ತಿ ನೀಡಲು ಶಿಫಾರಸು ಮಾಡಿದ ಕೆಲವು ದಿನಗಳ ನಂತರ, ಕೇಂದ್ರ ಕಾನೂನು ಸಚಿವಾಲಯವು ಶನಿವಾರ ಪ್ರತ್ಯೇಕ ಅಧಿಸೂಚನೆಗಳಲ್ಲಿ ಅವರ ನೇಮಕಾತಿಗಳನ್ನು ಪ್ರಕಟಿಸಿದೆ.
ಅವರು ಮುಂದಿನ ವಾರದ ಆರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು ಅಲ್ಲಿಗೆ ಸುಪ್ರೀಂ ಕೋರ್ಟ್ ತನ್ನ ಮಂಜೂರಾದ 34 ನ್ಯಾಯಾಧೀಶರ ಬಲವನ್ನು ಮರಳಿ ಪಡೆಯುತ್ತದೆ ಎನ್ನಲಾಗಿದೆ