ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದರೆ ಬಿಜೆಪಿಯನ್ನು ಬೆಂಬಲಿಸಿದಂತಲ್ಲ: ಶಿವಸೇನೆ ಸ್ಪಷ್ಟನೆ

Prasthutha|

ಮುಂಬೈ: NDA ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಔಪಚಾರಿಕವಾಗಿ ಬೆಂಬಲ ಸೂಚಿಸುವುದು ಎಂದರೆ ಬಿಜೆಪಿಯನ್ನು ಬೆಂಬಲಿಸಿದಂತಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.

- Advertisement -

ಈ ಮಧ್ಯೆ ವಿರೋಧ ಪಕ್ಷದ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ವಿರುದ್ಧ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಔಪಚಾರಿಕವಾಗಿ ಬೆಂಬಲ ಸೂಚಿಸುವ ನಿರೀಕ್ಷೆಯಿದೆ. ಮಹಾ ವಿಕಾಸ್ ಆಘಾಡಿಯಲ್ಲಿ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶಿವಸೇನಾ ಮಿತ್ರಪಕ್ಷಗಳಾಗಿದ್ದು, ಅವು ಸಿನ್ಹಾ ಅವರನ್ನು ಬೆಂಬಲಿಸುತ್ತಿವೆ.

ಇತ್ತೀಚೆಗೆ ನಡೆದ ಶಿವಸೇನೆಯ ಆಂತರಿಕ ಸಭೆಯಲ್ಲಿ ಸುಮಾರು 22 ಸಂಸದರು ಮುರ್ಮು ಅವರನ್ನು ಬೆಂಬಲಿಸುವಂತೆ ಠಾಕ್ರೆ ಅವರನ್ನು ಒತ್ತಾಯಿಸಿದ್ದರು.

- Advertisement -

ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದು ಎಂದರೆ ಬಿಜೆಪಿಯನ್ನು ಬೆಂಬಲಿಸುವುದು ಎಂದರ್ಥವಲ್ಲ. ಇನ್ನೊಂದು ಕಡೆ ಯಶವಂತ್ ಸಿನ್ಹಾ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟು ಗಟ್ಟಿಗೊಳ್ಳಬೇಕು ಎಂಬ ಅಭಿಪ್ರಾಯವಿದೆ ಎಂದೂ ವಕ್ತಾರ ಸಂಜಯ್ ರಾವುತ್ ತಿಳಿಸಿದ್ದಾರೆ.



Join Whatsapp