ರಿಷಿ ಸುನಕ್ ಅವರನ್ನು ಬಿಟ್ಟು ಬೇರೆ ಯಾರನ್ನಾದರೂ ಬೆಂಬಲಿಸಿ: ಬೋರಿಸ್ ಜಾನ್ಸನ್

Prasthutha|

ಲಂಡನ್: ಬ್ರಿಟನ್ ಪ್ರಧಾನಿ ಆಯ್ಕೆ ಚುನಾವಣೆಯು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಭಾರತೀಯ ಮೂಲದ ರಿಷಿ ಸುನಕ್ ಅವರು ಎರಡು ಸುತ್ತಿನ ಮತದಾನ ಎಣಿಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ ಇಂಗ್ಲೆಂಡ್ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ರಿಷಿ ಸುನಕ್ ಅವರನ್ನು ಬಿಟ್ಟು ಬೇರೆ ಯಾರನ್ನಾದರೂ ಬೆಂಬಲಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಬೋರಿಸ್ , ಜುಲೈ 7ರಂದು  ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಾವು ಬೆಂಬಲ ಕಳೆದುಕೊಳ್ಳುವಲ್ಲಿ ರಿಷಿ ಸುನಕ್  ಪ್ರಮುಖ ಪಾತ್ರ ವಹಿಸಿದ್ದಾರೆಂದು ಬೋರಿಸ್ ಆರೋಪಿಸಿ, ರಿಷಿ ಅವರಿಗೆ ಪ್ರಧಾನಿ ಆಯ್ಕೆ ಚುನಾವಣೆಯಲ್ಲಿ ಬೆಂಬಲ ನೀಡದಂತೆ ನಾಯಕನ ಆಯ್ಕೆ ಚುನಾವಣೆಯಲ್ಲಿ ಸೋತ ಬೆಂಬಲಿಗರಿಗೆ ಸೂಚಿಸಿದ್ದಾರೆ.

ತಾನು ಯಾವುದೇ ನಾಯಕತ್ವದ ಅಭ್ಯರ್ಥಿಗಳನ್ನು ಅನುಮೋದಿಸುವುದಿಲ್ಲ ಅಥವಾ ಸ್ಪರ್ಧೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ಜಾನ್ಸನ್, ಪಕ್ಷದ ನಾಯಕನ ಆಯ್ಕೆ ಚುನಾವಣೆಯಲ್ಲಿ ಸೋತ ಸ್ಪರ್ಧಿಗಳೊಂದಿಗೆ ಗುಪ್ತ ಸಂಭಾಷಣೆ ನಡೆಸಿದ್ದಾರೆ ಮತ್ತು ಸುನಕ್ ಪ್ರಧಾನಿಯಾಗಬಾರದು ಎಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

ಬದಲಾಗಿ ಹಂಗಾಮಿ ಪ್ರಧಾನ ಮಂತ್ರಿಯು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರೂಸ್ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಅಥವಾ ವಾಣಿಜ್ಯ ಸಚಿವ ಪೆನ್ನಿ ಮರ್ಡೌಂಟ್ ಬಗ್ಗೆಯೂ ಜಾನ್ಸನ್ ವಿಶ್ವಾಸ ಹೊಂದಿದ್ದಾರೆ. ಸುನಕ್ ಬದಲಿಗೆ ಇವರನ್ನಾದರೂ ಆರಿಸಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ತಮ್ಮ ಸಂಪುಟದಿಂದ ರಾಜೀನಾಮೆ ನೀಡುವ ಮೂಲಕ  ರಿಷಿ ಸುನಕ್ ತಮಗೆ ದ್ರೋಹ ಎಸಗಿದ್ದಾರೆ ಎಂದು ಅವರ ವಿರುದ್ಧ ಕೋಪಗೊಂಡಿರುವ ಬೋರಿಸ್ ಜಾನ್ಸನ್ ಮತ್ತು ಅವರ ಬಣ ‘ಯಾರಾದರೂ ಒಕೆ, ರಿಷಿ ಸುನಕ್ ಬೇಡ ಎಂಬ ಗುಪ್ತ ಪ್ರಚಾರ ನಡೆಸಿದ್ದಾರೆ ಎಂಬ ಮಾಹಿತಿ ದೊರಕಿದೆ.

Join Whatsapp