ಭ್ರಷ್ಟಾಚಾರ ಮುಕ್ತ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಎಸ್’ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸಿ: ಅಫ್ಸರ್ ಕೊಡ್ಲಿಪೇಟೆ

Prasthutha|

ಚಿಕ್ಕಮಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಪಕ್ಷ 2023 ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಂಗಡಿ ಚಂದ್ರು ಅವರನ್ನು ಕಣಕ್ಕೆ ಇಳಿಸಲಿದೆ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.

- Advertisement -


ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಕ್ಷೇತ್ರದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ BJP ಶಾಸಕರಿದ್ದಾರೆ, ಇಲ್ಲಿಯ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಸಚಿವರಾಗಿದ್ದರೂ ಜಿಲ್ಲೆಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಸಂಸದರು ತಮ್ಮ ಕ್ಷೇತ್ರದ ಕಡೆ ಮುಖ ಮಾಡಿ ಎಷ್ಟೋ ತಿಂಗಳುಗಳೇ ಕಳೆದಿದೆ ಎಂದು ಹೇಳಿದರು.
ಜಿಲ್ಲೆಯ ಕೆಲವು ಪ್ರಮುಖ ಸಮಸ್ಯೆಗಳು ಈ ಕೆಳಕಂಡಂತೆ ಇವೆ.

  • ಅಭಿವೃದ್ಧಿ ಕಾಣದ ಆರೋಗ್ಯ ವ್ಯವಸ್ಥೆ, ಜಿಲ್ಲೆಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇಲ್ಲದೆ ಇರುವ ಕಾರಣ ಬಡವರು, ಕೂಲಿ ಕಾರ್ಮಿಕರು ಮಂಗಳೂರು, ಹಾಸನ, ಬೆಂಗಳೂರು ಕಡೆಗೆ ಹೋಗುವಂತಾಗಿದೆ,
  • ಚಿಕ್ಕಮಗಳೂರು ನಗರದಲ್ಲಿ ಶುದ್ಧ ಮತ್ತು ಸ್ವಚ್ಛ ನೀರಿನ ವ್ಯವಸ್ಥೆ ಇಲ್ಲದಿರುವುದು,ಕಲುಷಿತ ನೀರನ್ನು ಕುಡಿದು, ಸುಮಾರು 150 ರಿಂದ 200 ಮಂದಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಇತ್ತೀಚೆಗೆ ದಾಖಲಾಗಿದ್ದರು
  • ಚಿಕ್ಕಮಗಳೂರು ನಗರಸಭೆಯು ನಗರದ ಹಲವಾರು ಬಡ ಜನರ ಮನೆಗಳನ್ನು ಕಾನೂನಿನ ವಿರುದ್ಧವಾಗಿ ನೋಟೀಸ್ ಸಹ ನೀಡದೆ ಏಕಾಏಕಿ ಜೆಸಿಬಿ ಬಳಸಿ ಅಕ್ರಮ ಕಟ್ಟಡಗಳೆಂದು ಹಲವಾರು ಮನೆಗಳನ್ನು ಬೀಳಿಸಿದ್ದರು ಇದರ ಬಗ್ಗೆ ಶಾಸಕರು ಇದುವರೆಗೆ ತುಟಿ ಬಿಚ್ಚಿಲ್ಲ
  • ಕಳೆದ 4,5 ವರ್ಷಗಳಿಂದ ಡಾಂಬರನ್ನೆ ಕಂಡದ ಹಳ್ಳಿಗಳ ರಸ್ತೆಗಳು, ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಡಾಂಬರ್ ಹಾಕಲಾಗುತ್ತಿದೆ,
  • ಮುಸ್ಲಿಮರು ಮತ್ತು ದಲಿತರು ವಾಸ ಮಾಡುವ ಏರಿಯಾಗಳು ಸ್ಲಂಏರಿಯಾಗಳಾಗಿ ಪರಿವರ್ತನೆಯಾಗಿವೆ. ದುರ್ವಾಸನೆ ದುರ್ನಾಥ ದಿಂದ ಸಾಮಾನ್ಯರು ದುಡಿದ ಹಣ ಆಸ್ಪತ್ರೆಗಳಿಗೆ ಇಡಬೇಕಾಗುತ್ತದೆ.
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರು ಚಿಕ್ಕಮಗಳೂರು ಹಬ್ಬ ಆಯೋಜಿಸಿರುವುದೇ ಅಭಿವೃದ್ಧಿ ಎಂದು ತಿಳಿದು ಬಿಟ್ಟಿದ್ದಾರೆ.
  • ಸದಾ ವಿವಾದಿತ ಭಾಷಣಗಳಿಂದ ಫೇಮಸ್ ಆಗಿರುವ ಸಿ.ಟಿ ರವಿಯವರು ಜನರಲ್ಲಿ ಕೋಮು ಸೌಹಾರ್ದ ಕೆಡಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ,
  • ಇನ್ನೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಯವರಂತು ತಾವು ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿ ಎಂದು ಮರೆತು ಬಿಟ್ಟಿದ್ದಾರೆ,
  • ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆಯ ಶಾಸಕರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
  • ಮೂಡಿಗೆರೆ ವಿಧಾನಸಭಾ ವ್ಯಾಪ್ತಿಯ ಮಲ್ಲಂದೂರು ಪೋಲಿಸ್ ಠಾಣೆಗೆ ಅಧಿಕಾರ ವಹಿಸಿಕೊಂಡ ಸರ್ಕಾರಿ ಪೋಲಿಸ್ ಅಧಿಕಾರಿಗೆ ಅವಾಜ್ ಹಾಕಿ ನಿಂದಿಸಿರುವ ಆಡಿಯೋ ವೈರಲ್ ಆಗಿತ್ತು,
  • ನೆರೆ ಪರಿಹಾರ ದೊರಕಿಸಿ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಸಂತ್ರಸ್ತರು ದಿನ ಬೆಳಗಾದರೆ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ,
  • ಮಲೆನಾಡು ಭಾಗದಲ್ಲಿ ಆನೆ, ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದ್ದು ಒಂದು ವರ್ಷದ ಅವಧಿಯಲ್ಲಿ 6 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಕಾಡಾನೆ ಹಾವಳಿ ನಿಯಂತ್ರಣಕ್ಕೆ ತರಲು ಇದುವರೆಗೆ ಶಾಶ್ವತ ಯೋಜನೆ ರೂಪಿಸುವಲ್ಲಿ ಶಾಸಕರು, ಸಂಸದರು ವಿಫಲವಾಗಿದ್ದಾರೆ,
  • ಕಳೆದ ಬಾರಿ ಬಂದ ನೆರೆಯ ವತಿಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿ ಕೊಡುವಲ್ಲಿ ವಿಫಲವಾಗಿದ್ದಾರೆ,
    *ಜಿಲ್ಲೆಯ ಎಲ್ಲಾ ರಸ್ತೆಗಳು ಒಂದು ವರ್ಷದಲ್ಲೇ ಸಂಪೂರ್ಣ ಹದಗೆಟ್ಟಿವೆ ಇದರಲ್ಲಂತೂ ಸಂಪೂರ್ಣವಾಗಿ 40% ಲೂಟಿ ನಡೆದಿದೆ.ರಸ್ತೆ ಹಾಕೋದು ಕಿತ್ತಾ ಕೋದ್ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ.ಅಲ್ಲಲ್ಲಿ ತೇಪೆ ಕೆಲಸ ನಡಿಯುತ್ತಿದೆ.
    ಇನ್ನು ಅನೇಕ ರೀತಿಯಲ್ಲಿ ಸಮಸ್ಯೆಗಳಿದ್ದು , ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಕಚೇರಿಗಳ ಸಮಸ್ಯೆಗಳು,ಅಧಿಕಾರಿಗಳ ಸಮಸ್ಯೆ, ಕಚೇರಿಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳು ಇಲ್ಲದೆ ಇರುವುದು,
    ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಭಿವೃದ್ಧಿ ಆಗಿದೆ ಅಂತ ಕ್ಷೇತ್ರದ ಶಾಸಕರು ವಿಡಂಬನಾತ್ಮಕವಾಗಿ ವಿವರಣೆ ಮಾಡುತ್ತಾರೆ.ಶಾಸಕರು ತಮ್ಮ ಮನಸ್ಸಿಗೆ ಬಂದಂತೆ ಕೆಲಸಗಳು ಮಾಡುತ್ತಿದ್ದಾರೆ ತೆರಿಗೆ ಹಣ ಅಭಿವೃದ್ಧಿ ವಿಚಾರದಲ್ಲಿ ಸಿಕ್ಕಾಪಟ್ಟೆ ಪೋಲಾಗುತ್ತಿದೆ,ಲೂಟಿನು ಆಗುತ್ತಿದೆ.ವಿರೋಧ ಪಕ್ಷಗಳಲ್ಲಿ ಪ್ರಶ್ನೆ ಮಾಡುವ ನಾಯಕರುಗಳೆ ಇಲ್ಲದಾಗಿದೆ,ಆದರೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತಪ್ಪು ಮಾಡುವ ಪ್ರತಿಯೊಬ್ಬರನ್ನು ಪ್ರಶ್ನಿಸುತ್ತಿದೆ. ನಾವುಗಳು 24X7 ಸಾರ್ವಜನಿಕರೊಂದಿಗೆ ಯಾವಾಗಲೂ ಬೆರೆತು ಪ್ರತಿಯೊಂದು ಸಮಸ್ಯೆ, ಕುಂದು ಕೊರತೆಗಳಲ್ಲಿ ಭಾಗಿಯಾಗಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಲು ತಯಾರಾಗಬೇಕಾಗಿ ಕರೆ ನೀಡಿದರು.
    ಈಗಾಗಲೇ ಎರಡು ಹಂತಗಳಲ್ಲಿ ಹತ್ತೊಂಬತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾಗೋಷ್ಠಿಗಳ ಮೂಲಕ ಘೋಷಿಸಿದ್ದಾರೆ ಮತ್ತು ಆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ ಎಂದು ಅವರು ತಿಳಿಸಿದರು.

  • ಎಸ್’ಡಿಪಿಐ ಎಲ್ಲರನ್ನೂ ಸಮಾನವಾಗಿ ಕಾಣುವ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡುತ್ತದೆ. ನಮ್ಮ ಪಕ್ಷ ಅಧಿಕಾರ ನಡೆಸುತ್ತಿರುವ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಆಡಳಿತವನ್ನು ಗಮನಿಸಿದರೆ ಅದು ನಿಮಗೆ ಸ್ಪಷ್ಟವಾಗುತ್ತದೆ ಎಂದು ಅಫ್ಸರ್ ಅವರು ತಿಳಿಸಿದರು.
    ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಮತ್ತು ಸಾಮಾಜಿಕ ಅಸಮಾನತೆಗಳು ಇಂದಿಗೂ ತಾಂಡವಾಡುತ್ತಿವೆ. ಜನರನ್ನು ನಿತ್ಯ ಕೊಲ್ಲುತ್ತಿವೆ. ಜನರ ತೆರಿಗೆ ಹಣ ನಿರಂತರ ಲೂಟಿಯಾಗುತ್ತಿದೆ. ಜಾತಿ ಬಲ, ಹಣ ಬಲ, ತೋಳ್ಬಲಗಳ ಮೆರೆದಾಟದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಆತಂಕದ ಬೆಂಕಿಯಲ್ಲಿ ಬೇಯಿಸಲಾಗುತ್ತಿದೆ. ಇದನ್ನು ತಡೆಯಲು, ಶುದ್ಧ ರಾಜಕಾರಣ ಮಾಡಲು, ಬಾಬಾ ಸಾಹೇಬ್ ಅಂಬೇಡ್ಕರ್ರವರ ಸಂವಿಧಾನವನ್ನು ನಿಜ ಅರ್ಥದಲ್ಲಿ ಜಾರಿ ಮಾಡಲು, ಎಲ್ಲರಿಗೂ ಸಮಾನ ಅವಕಾಶದ ಜೊತೆಗೆ ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ಕಟ್ಟಲು, ಜನಪರವಾದ ಪ್ರಾಮಾಣಿಕ ಮತ್ತು ನಿಸ್ವಾರ್ಥ ಮನಸ್ಸಿನ ಶಾಸಕರುಗಳನ್ನು ನಾವು ಆಯ್ಕೆ ಮಾಡಬೇಕಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  • SDPI ಪಕ್ಷ ಕಳೆದ 13 ವರ್ಷಗಳಿಂದ ದೇಶದ 20 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ SDPIನ 300ಕ್ಕೂ ಹೆಚ್ಚು ಸ್ಥಳೀಯ ಜನಪ್ರತಿನಿಧಿಗಳು ಜನ ಸೇವೆಯಲ್ಲಿ ತೊಡಗಿದ್ದಾರೆ. ಎಲ್ಲಾ ಜಾತಿ ಧರ್ಮದವರಲ್ಲಿ ಯಾವ ಭೇದವೆಣಿಸದೆ ನಿಷ್ಪಕ್ಷಪಾತವಾಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ, ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷಾ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಅಭ್ಯರ್ಥಿ ಅಂಗಡಿ ಚಂದ್ರು, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಂಟರಮುಖಿ, ಉಳ್ಳಾಲ್ ರಾಜ್ಯ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಪಸ್ಥಿತರಿದ್ದರು.


Join Whatsapp