ಕೋಕಾ ಕೋಲಾ ಮತ್ತು ನೆಸ್ಲೆ ಉತ್ಪನ್ನಗಳನ್ನು ತನ್ನ ದೇಶದ ರೆಸ್ಟೋರೆಂಟ್‌ಗಳಿಂದ ಟರ್ಕಿ ಸಂಸತ್ತು ತೆಗೆದು ಹಾಕಿದೆ. ಇಸ್ರೇಲ್’ಗೆ ಬೆಂಬಲ ನೀಡಿದ ಆರೋಪದ ಮೇಲೆ ಈ ಕ್ರಮ ಕೈಗೊಂಡಿದೆ.
ಇಸ್ರೇಲ್’ನ್ನ ಬೆಂಬಲಿಸುವ ಕಂಪೆನಿಗಳ ಉತ್ಪನ್ನಗಳನ್ನು ಸಂಸತ್ತಿನ ಕ್ಯಾಂಪಸ್ನಲ್ಲಿರುವ ರೆಸ್ಟೋರೆಂಟ್‌ಗಳು ಕೆಫೆಟೇರಿಯಾಗಳು ಮತ್ತು ಚಹಾ ಮನೆಗಳಲ್ಲಿ ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಸಂಸತ್ತಿನ ಹೇಳಿಕೆ ತಿಳಿಸಿದೆ.
ಗಾಝಾ ಮೇಲಿನ ಕ್ರೂರ ದಾಳಿಗಳನ್ನು ಬೆಂಬಲಿಸುವ ಇಸ್ರೇಲ್ ಮತ್ತು ಪಾಶ್ಚಿಮಾತ್ಯ ಕಂಪೆನಿಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಲಾಗುತ್ತಿದೆ.