ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಸೋಮವಾರ (ಆ.02) ಜಾತಿ ಗಣತಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ಜಾತಿ ಗಣತಿಯು ಜನರ ಕಲ್ಯಾಣ ಅಗತ್ಯಗಳನ್ನು ಪರಿಹರಿಸಲು ಉಪಯುಕ್ತವಾಗಿದೆ ಎಂದು ಹೇಳಿದೆ. ಆದರೆ ಅದನ್ನು ಚುನಾವಣಾ ಉದ್ದೇಶಗಳಿಗಾಗಿ ಬಳಸಬಾರದು ಎಂದೂ ಸೂಚಿಸಿದೆ.
ಬಗ್ಗೆ ಮಾತನಾಡಿರುವ ಆರ್‌ಎಸ್ಎಸ್ ಮುಖ್ಯ ವಕ್ತಾರ ಸುನಿಲ್ ಅಂಬೆಕರ್, ದತ್ತಾಂಶಗಳ ಸಂಗ್ರಹಣೆಗೆ ಸರ್ಕಾರವು ಜಾತಿ ಗಣತಿ ಮಾಡಬೇಕು. ಜಾತಿ ಪ್ರತಿಕ್ರಿಯೆಗಳು ನಮ್ಮ ಸಮಾಜದಲ್ಲಿ ಸೂಕ್ಷ್ಮ ವಿಷಯವಾಗಿದೆ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಅವು ಮುಖ್ಯವಾಗಿವೆ. ಆದರೆ, ಜಾತಿ ಗಣತಿಯನ್ನು ಚುನಾವಣಾ ಪ್ರಚಾರ ಮತ್ತು ಚುನಾವಣಾ ಉದ್ದೇಶಗಳಿಗಾಗಿ ಬಳಸಬಾರದು ಎಂದಿದ್ದಾರೆ.
ಇತ್ತೀಚೆಗೆ ಜಾತಿ ಗಣತಿಗೆ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿದೆ. ಇದನ್ನು ಸಮಾಜದ ಸರ್ವತೋಮುಖ ಪ್ರಗತಿಗೆ ಬಳಸಬೇಕು ಎಂದು ನಾವು ನಂಬುತ್ತೇವೆ. ಹಾಗೆ ಮಾಡುವಾಗ ಎಲ್ಲಾ ಕಡೆಯವರು ಸಾಮಾಜಿಕ ಸಾಮರಸ್ಯ ಮತ್ತು ಸಮಗ್ರತೆಗೆ ಭಂಗ ಬರದಂತೆ ನೋಡಿಕೊಳ್ಳಬೇಕು ಎಂದು ಸುನಿಲ್ ಅಂಬೆಕರ್ ಹೇಳಿದರು.