ಚುನಾವಣಾ ಅಖಾಡಕ್ಕೆ ಸುನೀತಾ ಕೇಜ್ರಿವಾಲ್: ದೆಹಲಿಯಲ್ಲಿ ರೋಡ್ ಶೋ

Prasthutha|

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರನ್ನು ಲೋಕಸಭೆ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿಸಲು ಆಪ್ ನಿರ್ಧರಿಸಿದೆ. ನಾಳೆಯಿಂದ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸುನೀತಾ ಕೇಜ್ರಿವಾಲ್ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ. 

- Advertisement -


ಅಬಕಾರಿ ಹಗರಣ ಸಂಬಂಧ ಜೈಲಿನಲ್ಲಿರುವ ಕೇಜ್ರಿವಾಲ್ ಅನುಪಸ್ಥಿತಿ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರಕ್ಕೆ ಚುರುಕು ನೀಡಲು ಸುನಿತಾ ಮುಂದಾಗಿದ್ದಾರೆ. ಈ ಮೂಲಕ ತೆರೆಮರೆಯಲ್ಲೇ ದೊಡ್ಡ ಹುದ್ದೆಯತ್ತ ಸುನಿತಾ ಅಡಿ ಇಡುತ್ತಿದ್ದಾರೆ ಎನ್ನುತ್ತಿವೆ ವರದಿಗಳು.


ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಪರ ಕೊಂಡ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ವಾರಾಂತ್ಯ ಸುನಿತಾ ಅವರ ಮೊದಲ ರ್ಯಾಲಿ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

Join Whatsapp