ಗೃಹ ಇಲಾಖೆ SDPI ಕಪಿಮುಷ್ಠಿಯಲ್ಲಿ ಇದ್ದಿದ್ದರೆ ಸುನೀಲ್ ಕುಮಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು: ರಿಯಾಝ್ ಕಡಂಬು

Prasthutha|

ಬೆಂಗಳೂರು: ಗೃಹ ಇಲಾಖೆ ಎಸ್ ಡಿಪಿಐ ಕಪಿಮುಷ್ಠಿಯಲ್ಲಿ ಸಿಲುಕಿರುವ ಅನುಮಾನ ಇದೆ ಎಂದಿದ್ದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿಕೆಗೆ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ತಿರುಗೇಟು ನೀಡಿದ್ದಾರೆ.

- Advertisement -


ಈ ಬಗ್ಗೆ ಫೇಸ್ ಬುಕ್ ಫೋಸ್ಟ್ ಮಾಡಿರುವ ಅವರು, ಸುನೀಲ್ ಕುಮಾರ್ ಹೇಳಿದಂತೆ ನಿಜವಾಗಿಯೂ ರಾಜ್ಯ ಗೃಹ ಇಲಾಖೆ ಎಸ್ಡಿಪಿಐ ನಿಯಂತ್ರಣದಲ್ಲಿ ಇದ್ದಿದ್ದರೆ ಸಿಮೆಂಟ್ ಕದ್ದು, ನಕಲಿ ಮೂರ್ತಿ ನಿರ್ಮಿಸಿ ಜನರ ಹಣ ಲೂಟಿ ಮಾಡಿರುವ ಶಾಸಕ ಸುನೀಲ್ ಕುಮಾರ್ ಉಡುಪಿ ಜಿಲ್ಲಾ ಕಾರಗೃಹದಲ್ಲಿ ಕಂಬಿ ಎಣಿಸುತ್ತಿದ್ದರು. ಫೋಕ್ಸೋ ಆರೋಪಿ ಯಡಿಯೂರಪ್ಪ ಪರಪ್ಪನ ಅಗ್ರಹಾರ ಜೈಲಿನಲ್ಲಿರುತ್ತಿದ್ದರು. ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿದ ಹರೀಶ್ ಪೂಂಜ ಮಂಗಳೂರು ಜೈಲಿನಲ್ಲಿರುತ್ತಿದ್ದರು. ಮಹಿಳೆಯರನ್ನು ನಿಂದಿಸಿರುವ ಕಲ್ಲಡ್ಕ ಭಟ್ ಮಂಡ್ಯ ಜೈಲಿನಲ್ಲಿರುತ್ತಿದ್ದರು. ಕೋವಿಡ್ ಲೂಟಿ ಮಾಡಿದ ಸುಧಕಾರ್ ಮತ್ತು ವಿಜಯೇಂದ್ರ ಜೈಲು ಸೇರುತ್ತಿದ್ದರು. ಪಿಎಸ್ಐ ಹಗರಣ, ಕೆಪಿಎಸ್ಸಿ ಹಗರಣ ಸೇರಿ ಇತರೆ ನೇಮಕಾತಿಗಳಲ್ಲಿ ಹಗರಣ ಮಾಡಿದವರು ಕಂಬಿ ಎಣಿಸುತ್ತಿದ್ದರು. ನಾಗಮಂಗಲ ಗಲಾಟೆಯ ಬೆಂಕಿಗೆ ಎಣ್ಣೆ ಸುರಿಯುತ್ತಿರುವ ಬಿಜೆಪಿ ನಾಯಕರು ಕಂಬಿ ಹಿಂದೆ ಬಂಧಿಯಾಗುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.


ನಾಗಮಂಗಲ ಗಲಭೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಗೃಹ ಇಲಾಖೆ ಎಸ್ ಡಿಪಿಐ ಕಪಿಮುಷ್ಠಿಯಲ್ಲಿ ಸಿಲುಕಿರುವ ಅನುಮಾನವಿದೆ. ರಾಜ್ಯವನ್ನು ತಾಲಿಬಾನ್, ಬಾಂಗ್ಲಾ ಆಗಲು ಬಿಡಬೇಡಿ. ಹಿಂದೂ ಧಾರ್ಮಿಕ ಚಟುವಟಿಕೆ ಮಾಡಲಾಗದದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದರು.



Join Whatsapp