ವಿಧಾನಸಭೆ ಮುಖ್ಯ ಸಚೇತಕ ಹುದ್ದೆಗೆ ಸುನೀಲ್ ಕುಮಾರ್ ರಾಜೀನಾಮೆ

Prasthutha|

ಬೆಂಗಳೂರು; ಕರ್ನಾಟಕ ವಿಧಾನ ಸಭೆಯ ಸರ್ಕಾರಿ ಮುಖ್ಯ ಸಚೇತಕ ಸ್ಥಾನಕ್ಕೆ ವಿ. ಸುನೀಲ್ ಕುಮಾರ್ ರಾಜಿನಾಮೆ ನೀಡಿದ್ದಾರೆ.
ವಿಧಾನಸಭೆಯ ಸರ್ಕಾರಿ ಮುಖ್ಯ ಸಚೇತಕರಾಗಿದ್ದ ವಿ.ಸುನೀಲ್ ಕುಮಾರ್ ಅವರು ಇತ್ತೀಚೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಈ ಹುದ್ದೆಗೆ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

- Advertisement -


ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಕಚೇರಿಯ ಮೂಲಗಳು ತಿಳಿಸಿವೆ.

Join Whatsapp