ಆಡಿಯೋದಲ್ಲಿ ಸುನೀಲ್ ಕುಮಾರ್ ಹೆಸರು: ಚೈತ್ರಾ ಕುಂದಾಪುರ ನನಗೆ ಗೊತ್ತಿಲ್ಲ ಎಂದ ಮಾಜಿ ಸಚಿವ

Prasthutha|

- Advertisement -

ಉಡುಪಿ: ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಗ್ಯಾಂಗ್​ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೀಲ್ ಮಾತುಕತೆಯಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್​ಹೆಸರು ಪ್ರಸ್ತಾಪ ವಿಚಾರ ‘ನಾನು ಯಾರ ಜೊತೆಗೆ ಫೋನ್‌ನಲ್ಲೂ ಮಾತಾಡಿಲ್ಲ. ಅವರ ಮುಖ ಪರಿಚಯವು ನನಗೆ ಇಲ್ಲ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಉಡುಪಿ ನಗರದಲ್ಲಿ ಮಾತನಾಡಿದ ಅವರು, ಆಕಸ್ಮಿಕವಾಗಿ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲೂ ಅವರನ್ನು ಭೇಟಿಯಾಗಿಲ್ಲ. ನನಗೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಪ್ರಕರಣವಿದು. ಪ್ರಕರಣ ಸಂಬಂಧ ಯಾವುದೇ ರೀತಿಯ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದರು.




Join Whatsapp