ಡಾ. ಸುಮತಿ ಹೆಗ್ಡೆ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ

Prasthutha|


ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ
ಜೆಡಿಎಸ್ ಅಧ್ಯಕ್ಷೆ ಸುಮತಿ ಹೆಗ್ಡೆ ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಈ ಬಗ್ಗೆ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಸುಮಾರು ಮೂರು ವರುಷಗಳಿಂದ ಮಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಹಗಲಿರುಳು ದುಡಿದು, ನನ್ನ ಸ್ವಂತ ಖರ್ಚಿನಿಂದ ಜನರ ಸೇವೆ ಮಾಡಿದುದರಲ್ಲಿ ನನಗೆ ಹೆಮ್ಮೆ ಇದೆ. ಆದರೆ ಪಕ್ಷದ ಕಾರ್ಯವೈಖರಿ, ಅಸಹಕಾರ ಕಾರಣಗಳಿಂದ ತೀವ್ರವಾಗಿ ಮನನೊಂದಿದ್ದೇನೆ. ಅದಲ್ಲದೇ ನನಗೆ ಲಭಿಸಿದ ಮತಗಳ ವಿಚಾರದಲ್ಲೂ ತೀವ್ರವಾಗಿ ನೊಂದಿದ್ದು‍, ಈ ಎಲ್ಲಾ ಕಾರಣಗಳಿಂದ ನಾನು ನನ್ನ ಅಪಾರ ಬೆಂಬಲಿಗರೊಂದಿಗೆ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುವುದಾಗಿ ಈ ಮೂಲಕ ತಿಳಿಸಬಯಸುತ್ತೇನೆ ಎಂದಿದ್ದಾರೆ.

ಅದೇ ರೀತಿ ಮಂಗಳೂರು ದಕ್ಷಿಣ ವಿಧಾನಸಭಾ ಜೆಡಿಎಸ್ ಪ್ರ.ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಲ್ತಾಫ್ ತುಂಬೆ ಅವರೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತಿದ್ದಾರೆ ಎಂದು ಈ ಮೂಲಕ ದೃಢಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.




Join Whatsapp